ಅರುಣಾಚಲ ಪ್ರದೇಶ : ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿರುವ ಹಯುಲಿಯಾಂಗ್-ಚಾಗ್ಲಗಂ ರಸ್ತೆಯಲ್ಲಿ ಗುರುವಾರ 21 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿಬಿದ್ದಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಂಜಾವ್ ಉಪ ಆಯುಕ್ತ ಮಿಲ್ಲೊ ಕೊಜಿನ್ ಅವರ ಪ್ರಕಾರ, ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸೋಮವಾರ ಅಪಘಾತ ಸಂಭವಿಸಿದೆ, ಆದರೆ ಇಂದು ಬೆಳಕಿಗೆ ಬಂದಿದೆ.
ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿರುವ ಹಯುಲಿಯಾಂಗ್-ಚಾಗಲಗಂ ರಸ್ತೆಯಲ್ಲಿ ಗುರುವಾರ 21 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಆಳವಾದ ಕಂದಕಕ್ಕೆ ಉರುಳಿಬಿದ್ದಿದ್ದಿದೆ.ಅಂಜಾವ್ ಉಪ ಆಯುಕ್ತ ಮಿಲ್ಲೊ ಕೊಜಿನ್ ಅವರ ಪ್ರಕಾರ, ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತ ಸೋಮವಾರ ಸಂಭವಿಸಿದೆ, ಗಾಯಗೊಂಡ ಒಬ್ಬರು ಪ್ರಧಾನ ಕಚೇರಿ ಪಟ್ಟಣವನ್ನು ತಲುಪಿ 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಅಂತರರಾಷ್ಟ್ರೀಯ ಗಡಿಯಿಂದ 45 ಕಿ.ಮೀ ದೂರದಲ್ಲಿರುವ ಚಾಗಲಗಂ ಗಡಿ ರಸ್ತೆಯಲ್ಲಿ ನಡೆದ ಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
