ಟ್ರೆಡ್​ ಮಿಲ್​​​ ಮೇಲಿದ್ದಾಗಲೇ ಕರೆಂಟ್​ ಶಾಕ್ : ಕುಸಿದು ಬಿದ್ದ ಟೆಕ್ಕಿ ಸ್ಥಳದಲ್ಲೇ ಸಾವು

ಜಿಮ್​ನಲ್ಲಿ ದೇಹ ದಂಡನೆಗೆಂದು ಹೋದ ವ್ಯಕ್ತಿ ವಿದ್ಯುತ್​ ಸ್ಪರ್ಶದಿಂದ ಪ್ರಾಣವನ್ನೇ ಕಳೆದುಕೊಂಡಂತಹ ದಾರುಣ ಘಟನೆಯೊಂದು ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಸಂಭವಿಸಿದೆ. 24 ವರ್ಷದ ವ್ಯಕ್ತಿ ಟ್ರೆಡ್​ಮಿಲ್​ನಲ್ಲಿ ಇದ್ದಾಗ ಈ ಅವಘಡ ಸಂಭವಿಸಿದೆ.

ಮೃತ ಯುವಕನನ್ನು ಸೆಕ್ಟರ್​ 19ರ ನಿವಾಸಿ ಸಕ್ಷಮ್​ ಪೃಥಿ ಎಂದು ಗುರುತಿಸಲಾಗಿದೆ. ಸಕ್ಷಮ್​ ಬಿಟೆಕ್​ ಪದವಿಧರರಾಗಿದ್ದರು. ಅಲ್ಲದೇ ಕಂಪನಿಯೊಂದರಲ್ಲಿ ಕೆಲಸ ಕೂಡ ಮಾಡುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೆಕ್ಟರ್​ 15ರಲ್ಲಿರುವ ಜಿಂಪ್ಲೆಕ್ಸ್​ ಫಿಟ್​ನೆಸ್​ ಝೋನ್​ ಎಂಬ ಜಿಮ್​​ನಲ್ಲಿ ಸಕ್ಷಮ್​ ದೇಹ ದಂಡನೆ ಮಾಡುತ್ತಿದ್ದರು. ಬೆಳಗ್ಗೆ 7:30ರ ಸುಮಾರಿಗೆ ಟ್ರೆಡ್​​ಮಿಲ್​ ಮೇಲೆ ವಾಕ್​ ಮಾಡುತ್ತಿದ್ದ ಸಂದರ್ಭದಲ್ಲಿ ಸಕ್ಷಮ್​​ಗೆ ಕರೆಂಟ್​ ಶಾಕ್​ ಹೊಡೆದಿದೆ.

ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಸಕ್ಷಮ್​ ವಿದ್ಯುತ್​ ಅವಘಡದಿಂದ ಸಾವನ್ನಪ್ಪಿರೋದು ದೃಢಪಟ್ಟಿದೆ. ಈ ಪ್ರಕರಣ ಸಂಬಂಧ ಜಿಮ್​ ಮ್ಯಾನೇಜರ್​ ಅನುಭವ್​ ದುಗ್ಗಲ್​ರನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read