ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಜಟಾಯು ತೀರ್ಥ ಗುಡ್ಡದ ಬಳಿ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.
ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ. ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿಯರಿಬ್ಬರು ಮೃತಪಟ್ಟಿದ್ದಾರೆ.
ಕನಿಮೋಳಿ ಈಶ್ವರನ್(23), ಹಿಂದುಜಾ ನಟರಾಜನ್(23) ಮೃತಪಟ್ಟ ವಿದ್ಯಾರ್ಥಿನಿಯರು. ಎಸ್.ಆರ್.ಎಂ. ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿನಿಯರು ಚೆನ್ನೈನ ವೆಟ್ರಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮೂಲಕ ದಾಂಡೇಲಿ, ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದಾರೆ.
ಗುರುವಾರ ದಾಂಡೇಲಿಯಿಂದ ತೆರಳಿ ಸಂಜೆ ಗೋಕರ್ಣ ತಲುಪಿದ್ದಾರೆ. ಸೂರ್ಯಸ್ತ ನೋಡಲು ಕುಡ್ಲೆ ಬೀಚ್ ಬಳಿಯ ಜಟಾಯುತೀರ್ಥ ಸಮುದ್ರ ತೀರಕ್ಕೆ ಬಂದಿದ್ದಾರೆ. ಸಂಜೆ ವೇಳೆ ಇಬ್ಬರು ವಿದ್ಯಾರ್ಥಿನಿಯರು ಬಂಡೆಯ ಮೇಲಿದ್ದಾಗ ಭಾರೀ ಅಲೆಗಳಿಗೆ ಸಿಕ್ಕು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯರು ಇಬ್ಬರ ರಕ್ಷಣೆಗೆ ಧಾವಿಸಿದರೂ ರಕ್ಷಿಸಲು ಸಾಧ್ಯವಾಗಿಲ್ಲ. ಅಡ್ವೆಂಚರ್ ಬೋಟ್ ಮೂಲಕ ವಿದ್ಯಾರ್ಥಿನಿಯರನ್ನು ದಡಕ್ಕೆ ತರಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.