ರಕ್ಷಕರೆ ರಾಕ್ಷಸರಾದ್ರೆ ಜೀವನ ನಡೆಸೋದು ಕಷ್ಟವಾಗುತ್ತದೆ. ಈಗ ಟ್ರಾಫಿಕ್ ಪೊಲೀಸ್ ಒಬ್ಬರ ದರ್ಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ಜೊತೆ ಕಾದಾಟಕ್ಕಿಳಿದ ವಿಡಿಯೋ ವೈರಲ್ ಆಗಿದೆ.
ಗಾಜಿಯಾಬಾದ್ ಟ್ರಾಫಿಕ್ ಪೊಲೀಸ್ ಅಧಿಕಾರಿ ಸುನಿಲ್, ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುನೀಲ್ ಕೆಲ ದಿನಗಳಿಂದ ಬೀದಿ ನಾಯಿಗಳಿಗೂ ದೊಣ್ಣೆಯಿಂದ ಹೊಡೆಯುತ್ತಾನೆಂದು ದೂರಲಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಗಾಜಿಯಾಬಾದ್ ಟ್ರಾಫಿಕ್ ಪೊಲೀಸ್ ಸುನಿಲ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಬೀದಿ ನಾಯಿಗಳಿಗೆ ಅವರು ಮನಸೋಇಚ್ಛೆ ಹೊಡೆಯುತ್ತಾರೆ ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನು ನೋಡಿದ ಬಳಕೆದಾರರು ಕೋಪಗೊಂಡಿದ್ದಾರೆ. ಸಾರ್ವಜನಿಕ ಸೇವಕ ಗೂಂಡಾನಂತೆ ವರ್ತಿಸುತ್ತಿದ್ದಾನೆ. ಇದ್ಯಾವ ರೀತಿ ನಡವಳಿಕೆ, ಭ್ರಷ್ಟ ಪೊಲೀಸ್ ನೌಕರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಅಧಿಕಾರಿಯ ಅತ್ಯಂತ ಹಿಂಸಾತ್ಮಕ ಹಾಗೂ ಬೇಜವಾಬ್ದಾರಿ ನಡವಳಿಕೆ ಇದು ಎಂದು ಇನ್ನೊಬ್ಬರು ಬರೆದಿದ್ದಾರೆ.
https://twitter.com/surbhirawatpfa/status/1826490958994678077?ref_src=twsrc%5Etfw%7Ctwcamp%5Etweetembed%7Ctwterm%5E1826490958994678077%7Ctwgr%5E649fb801812b07d24ebe8f9d1ba7fbafac74c12c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Fghaziabadtrafficpolicemanharasseswomanpubliclybeatsstraydogswatch-newsid-n627636323