ಇಲ್ಲಿದೆ ಸೆಪ್ಟೆಂಬರ್ 2023 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್ ಗಳ ಪಟ್ಟಿ

ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಅನೇಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು ಭಾರತದಲ್ಲಿ ಸ್ಕೂಟರ್ ಮಾರಾಟವು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 10 ದ್ವಿಚಕ್ರ ವಾಹನಗಳ ಪೈಕಿ ಹೋಂಡಾ ಆಕ್ಟೀವಾ ಬೈಕ್ ಪ್ರಥಮ ಸ್ಥಾನದಲ್ಲಿದೆ.

ಸೆಪ್ಟೆಂಬರ್ 2023 ರಲ್ಲಿ ಎಲ್ಲ ಕಂಪನಿಗಳ ಒಟ್ಟು 5,18,912 ಬೈಕ್ ಮಾರಾಟವಾಗಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಗೆ ಹೋಲಿಸಿದರೆ ಮಾರಾಟವಾದ ಬೈಕ್ ಗಳ ಸಂಖ್ಯೆ ಹೆಚ್ಚಳವಾಗಿದೆ. ಅಷ್ಟೇ ಅಲ್ಲದೇ ಆಗಸ್ಟ್ 2023 ರಲ್ಲಿ ಮಾರಾಟವಾದ ಬೈಕ್ ಗಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ.

ಸೆಪ್ಟೆಂಬರ್ 2022 ರಲ್ಲಿ ಮಾರಾಟವಾದ 4,87,133 ಯೂನಿಟ್‌ಗಳು ಮತ್ತು ಆಗಸ್ಟ್ 2023 ರಲ್ಲಿ ಮಾರಾಟವಾದ 4,96,037 ಯುನಿಟ್‌ಗಳಿಗೆ ಹೋಲಿಸಿದರೆ 5,18,912 ಸ್ಕೂಟರ್ ಮಾರಾಟವು ಸಾಕಷ್ಟು ಶ್ಲಾಘನೀಯವಾಗಿದೆ. ವಿಶೇಷವಾಗಿ ಕಳೆದ ವರ್ಷದ ಸೆಪ್ಟೆಂಬರ್ ಗೆ ಹೋಲಿಸಿದರೆ 31,779 ಹೆಚ್ಚು ಸ್ಕೂಟರ್ ಮಾರಾಟವಾಗಿದ್ದು ಶೇ. 6.52% ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ಆಗಸ್ಟ್ ಗಿಂತ 22,875 ಹೆಚ್ಚು ಬೈಕ್ ಮಾರಾಟದಿಂದ ಶೇ. 4.61 ರಷ್ಟು ಬೆಳವಣಿಗೆಯನ್ನ ಕಂಡಿದೆ.

ಕಳೆದ ತಿಂಗಳು ಒಟ್ಟು 2,35,056 ಬೈಕ್ಸ್ ಮಾರಾಟ ಮಾಡುವುದರೊಂದಿಗೆ ಹೋಂಡಾ ಆಕ್ಟಿವಾ ಪ್ರಥಮ ಸ್ಥಾನದಲ್ಲಿದೆ. ಆಗಸ್ಟ್ ಗಿಂತ ಸೆಪ್ಟೆಂಬರ್ ನಲ್ಲಿ 20,184 ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡಲಾಗಿದ್ದು ಶೇ. 9.39ರಷ್ಟು ಬೆಳವಣಿಗೆ ಕಂಡಿದೆ .

ಹೋಂಡಾ ಆಕ್ಟೀವಾ ಮಾರುಕಟ್ಟೆ ಪಾಲು 45.30% ಆಗಿದೆ. ಇದು ಕಳೆದ ತಿಂಗಳಿನಲ್ಲಿದ್ದ 43.32% ಗಿಂತ ಹೆಚ್ಚಾಗಿದೆ. ಟಿವಿಎಸ್ ಜುಪಿಟರ್ ಭಾರತದಲ್ಲಿ ಮಾರಾಟವಾಗುವ ಅತಿ ಹೆಚ್ಚು ಸ್ಕೂಟರ್ ಗಳ ಪೈಕಿ 2ನೇ ಸ್ಥಾನದಲ್ಲಿದೆ.

ಕಳೆದ ತಿಂಗಳು 83,130 ಟಿವಿಎಸ್ ಜುಪಿಟರ್ ಸ್ಕೂಟರ್ ಮಾರಾಟವಾಗಿವೆ. ನಂತರದ ಸ್ಥಾನದಲ್ಲಿ ಸುಜುಕಿ ಅಕ್ಸೆಸ್, ಟಿವಿಎಸ್ Ntorq, ಹೋಂಡಾ ಡಿಯೋ, ಟಿವಿಎಸ್ ಐಕ್ಯೂಬ್, ಓಲಾ ಎಸ್ 1, ಸುಜುಕಿ Burgman, ಯಮಹ RayZR, ಹೀರೋ ಡೆಸ್ಟಿನಿ ಬೈಕ್ ಗಳಿವೆ.

ಟಿವಿಎಸ್ ಐ ಕ್ಯೂಬ್ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಓಲಾ S1 ಈ ಪೈಕಿ ಎರಡನೇ ಸ್ಥಾನದಲ್ಲಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read