ಟೋಲ್ ಆಪರೇಟರ್ ಮೇಲೆಯೇ ಹರಿದ ಕ್ಯಾಂಟರ್: ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಶುಲ್ಕ ಪಾವತಿಸದೇ ತೆರಳುತ್ತಿದ್ದ ಕ್ಯಾಂಟರ್ ಲಾರಿ ತಡೆಯಲು ಹೋಗಿ ಟೋಲ್ ಆಪರೇಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್ ನಲ್ಲಿ ನಡೆದಿದೆ.

ನಾಗರಾಜ್ (25) ಮೃತ ಟೋಲ್ ಆಪರೇಟರ್. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕ್ಯಾಂಟರ್ ಚಾಲಕನೊಬ್ಬ ಟೋಲ್ ಶುಲ್ಕ ಕಟ್ಟದೇ ಹೋಗುತ್ತಿದ್ದ. ಈ ವೇಳೆ ಕ್ಯಾಂಟರ್ ಲಾರಿ ತಡೆಯಲು ನಾಗರಾಜ್ ಮುಂದಾಗಿದ್ದಾರೆ. ಹಿಂಬದಿಯಿಂದ ಬಂದ ಕ್ಯಾಂಟರ್ ಚಾಲಕ ಲಾರಿಯನ್ನು ನಾಗರಾಜ್ ಮೇಲೆಯೇ ಹತ್ತಿಸಿಕೊಂಡು ಹೋಗಿದ್ದಾನೆ.

ನಾಗರಾಜ್ ರಸ್ತೆಯಲ್ಲಿಯೇ ಸಾವು-ಬದುಕಿನ ನಡುವೆ ಹೋರಾಡಿ ಪ್ರಾಣಬಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಸಂಚಾರಿ ಪೊಲೀಸರು, ತಡರಾತ್ರಿ ತಪ್ಪಿಸಿಕೊಂಡು ಪರಾರಿಯಾಗಿದ್ದ ಕ್ಯಾಂಟರ್ ಚಾಲಕನನ್ನು ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read