ಮಂಗಳೂರು: ನವಜಾತ ಶಿಶುವಿನ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.
ಶೌಚಾಲಯದಲ್ಲಿ ಶಿಶುವಿನ ಶವ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಮೃತ ಮಗುವಿನ ತಾಯಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಿಸಿಟಿವಿ ತಂತ್ರಾಂಶ ಆಧರಿಸಿ ಮಗುವಿನ ತಾಯಿ ಪತ್ತೆ ಹಚ್ಚಲಾಗಿದೆ. ಜಾಮಿಯಾ ಮಸೀದಿ ಆವರಣದಲ್ಲಿದ್ದ ಶೌಚಾಲಯದಲ್ಲಿ ಶಿಶು ಪತ್ತೆಯಾಗಿತ್ತು. ಮಸೀದಿಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಾರಣ ದಾಖಲಾಗಿತ್ತು. ಕಾರ್ಮಿಕರಿಗಾಗಿ ನಿರ್ಮಿಸಿದ್ದ ಶೌಚಾಲಯ ಇದಾಗಿದ್ದು, ತಾಯಿಯನ್ನು ಪತ್ತೆ ಮಾಡಲಾಗಿದೆ ಎಂದು ಉಡುಪಿ ಎಸ್ ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ
ಸ್ಥಳೀಯ ಯುವತಿಯೊಬ್ಬಳ ಶಿಶು ಇದಾಗಿದೆ. ಯುವತಿ ಪತ್ತೆ ಮಾಡಿ ವಿಚಾರಣೆ ನಡೆಸಲಾಗಿದ್ದು, ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಲೆ. ತಾನೇ ಗರ್ಭಪಾತಕ್ಕೆ ಯತ್ನಿಸಿದ್ದು, ಏಕಾಏಕಿ ಹೊಟ್ಟೆ ನೋವು ಆರಂಭವಾದಾಗ ಶೌಚಾಲಯಕ್ಕೆ ಬಂದಿದ್ದಾಳೆ. ಶೌಚಾಲಯದಲ್ಲಿ ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಏಳೂವರೆ ಎಂಟು ತಿಮ್ಗಳ ಭ್ರೂಣ ಇದಾಗಿದೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸ್ಚಾರ್ಜ್ ಬಳಿಕ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.