ಸುಕುಮಾರ್ ನಿರ್ದೇಶನದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘ರಂಗಸ್ಥಲಂ’ ಚಿತ್ರ ಬಿಡುಗಡೆಯಾಗಿ ಇಂದಿಗೆ ಆರು ವರ್ಷಗಳಾಗಿವೆ. 2018 ಮಾರ್ಚ್ 30ರಂದು ರಿಲೀಸ್ ಆಗಿದ್ದ, ಈ ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ‘ರಂಗಸ್ಥಲಂ’ ಚಿತ್ರತಂಡ ಆರು ವರ್ಷ ಪೂರೈಸಿರುವ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ರಾಮ್ಚರಣ್ಗೆ ಜೋಡಿಯಾಗಿ ಸಮಂತಾ ಅಭಿನಯಿಸಿದ್ದು, ಆದಿ ಪಿನಿ ಶೆಟ್ಟಿ, ಜಗಪತಿ ಬಾಬು, ಪ್ರಕಾಶ್ ರಾಜ್, ನರೇಶ್, ರೋಹಿಣಿ, ಪೂಜಿತಾ ಪೊನ್ನಡ, ಅನಸೂಯಾ ಭಾರದ್ವಾಜ್, ಬ್ರಹ್ಮಾಜಿ, ಅಜಯ್ ಘೋಷ್, ಸತ್ಯ, ಛತ್ರಪತಿ ಶೇಖರ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ಪೂಜಾ ಹೆಗಡೆ ‘ಜಿಗೇಲು ರಾಣಿ’ಎಂಬ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ. ನವೀನ್ ನೂಲಿ ಸಂಕಲನವಿದೆ.
https://twitter.com/telugufilmnagar/status/1773981759639568895