ಇಂದು ವರ್ಷದ ಮೊದಲ ಅಮವಾಸ್ಯೆ, ತುಳಸಿ ಪೂಜೆಯನ್ನು ಈ ರೀತಿ ಮಾಡಿದರೆ ಆಗಬಹುದು ಕೋಟ್ಯಾಧಿಪತಿ…!

ಜ್ಯೋತಿಷ್ಯದಲ್ಲಿ ಪ್ರತಿಯೊಂದು ದಿನಾಂಕಕ್ಕೂ ತನ್ನದೇ ಆದ ಮಹತ್ವವಿದೆ. ಕೃಷ್ಣ ಪಕ್ಷದ ಅಮವಾಸ್ಯೆ ಕೂಡ ವಿಶೇಷ ಮಹತ್ವವನ್ನು ಹೊಂದಿದೆ. ಇಂದು ವರ್ಷದ ಮೊದಲ ಅಮವಾಸ್ಯೆ. ಈ ದಿನ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದ ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಅಷ್ಟೇ ಅಲ್ಲ ಈ ದಿನ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಪಿತೃ ದೋಷ, ಕಾಳಸರ್ಪ ದೋಷ ಮತ್ತು ಶನಿ ದೋಷದಿಂದ ಮುಕ್ತಿ ಪಡೆಯಲು ಅಮವಾಸ್ಯೆಯ ದಿನ ಸೂಕ್ತವಾಗಿದೆ.

ಅಮವಾಸ್ಯೆ ಈ ಬಾರಿ ಗುರುವಾರ ಬಂದಿದೆ. ಗುರುವಾರವನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆರಾಧನೆಗೆ ಸಮರ್ಪಿಸಲಾಗಿದೆ. ಗ್ರಂಥಗಳ ಪ್ರಕಾರ ಲಕ್ಷ್ಮಿ ದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ.ಹಾಗಾಗಿ ಈ ದಿನ ತುಳಸಿ ಪೂಜೆ ಮಾಡಬೇಕು.

ಈ ದಿನ ಹಳದಿ ದಾರಕ್ಕೆ 108 ಗಂಟುಗಳನ್ನು ಕಟ್ಟಿಕೊಳ್ಳಿ. ತುಳಸಿ ಗಿಡಕ್ಕೆ ಈ ದಾರವನ್ನು ಕಟ್ಟಿ, ನಂತರ ಪೂಜೆ ಮಾಡಿ. ಇದು ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಲು ಸಹಾಯ ಮಾಡುತ್ತದೆ. ಎಂದಿಗೂ ನಿಮಗೆ ಹಣದ ಕೊರತೆಯಾಗುವುದಿಲ್ಲ.

ಧರ್ಮಗ್ರಂಥಗಳ ಪ್ರಕಾರ ಅಮವಾಸ್ಯೆಯಂದು ತುಳಸಿ ಕಟ್ಟೆಯ ಬಳಿ ಕುಳಿತು ಓಂ ವಿಘ್ನವಿನಾಶಕ ದೇವತಾಭ್ಯೋ ನಮಃ ಎಂಬ ಮಂತ್ರ ಪಠಿಸಿದರೆ ವೃತ್ತಿ ಮತ್ತು ವ್ಯವಹಾರದಲ್ಲಿನ ಅಡೆತಡೆ ನಿವಾರಣೆಯಾಗುತ್ತದೆ.

ಅಮವಾಸ್ಯೆಯಂದು ಅಶ್ವತ್ಥ ಮರದ ಕೆಳಗೆ ಎಣ್ಣೆಯ ದೀಪವನ್ನು ಬೆಳಗಿಸಿ. ಅಲ್ಲಿಯೇ ನಿಂತು ಪಿತ್ರಾ ಸೂಕ್ತಂ ಪಠಿಸುವುದರಿಂದ ಪಿತ್ರದೋಷದಿಂದ ಮುಕ್ತಿ ಸಿಗುತ್ತದೆ. ಪೂರ್ವಜರ ಆಶೀರ್ವಾದವು ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಪೂಜೆಯ ಸಂದರ್ಭದಲ್ಲಿ ತುಳಸಿಗೆ ನೀರನ್ನು ಅರ್ಪಿಸುವಾಗ ಕೆಲವು ಹನಿಗಳಷ್ಟು ಹಾಲನ್ನು ಬೆರೆಸಿ. ಇದು ಬಡತನವನ್ನು ನಿವಾರಿಸುತ್ತದೆ. ಈ ದಿನದಂದು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಳಸಿ ಎಲೆಗಳನ್ನು ಅರ್ಪಿಸಬೇಕು. ಜೊತೆಗೆ ಬ್ರಾಹ್ಮಣರಿಗೆ ಅನ್ನದಾನ ಮಾಡಿ. ಇದರಿಂದ ಶಿಕ್ಷಣ, ವೈವಾಹಿಕ ಜೀವನ ಮತ್ತು ಆರೋಗ್ಯ ಸುಧಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read