ನಾಡಿನೆಲ್ಲೆಡೆ ಇಂದು ‘ಕ್ರಿಸ್ ಮಸ್’ ಸಂಭ್ರಮ : ಶುಭಾಶಯ ಕೋರಿದ ನಟಿ ಮೇಘನಾ ರಾಜ್

ಬೆಂಗಳೂರು : ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದ್ದು, ನಟಿ ಮೇಘನಾ ರಾಜ್ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಬೆಂಗಳೂರಿನ ಕೋರಮಂಗಲದಲ್ಲಿ ಮಾತನಾಡಿದ ನಟಿ ಮೇಘನಾ ರಾಜ್ ನಾವು ಹೊಸ ವರ್ಷದ ಪಾದಾರ್ಪಣೆ ಮಾಡುತ್ತಿದ್ದೇವೆ, ಎಲ್ಲರಿಗೂ ಶುಭವಾಗಲಿ. ನನ್ನ ಮಗ ರಾಯನ್ ನಾನು ಬೆಸ್ಟ್ ಫ್ರೆಂಡ್ಸ್ ಎಂದರು. ಕ್ರಿಸ್ ಮಸ್ ಹಬ್ಬವನ್ನು ಬರೀ ಕ್ರಿಶ್ಚಿಯನ್ನುರು ಮಾತ್ರ ಆಚರಿಸಲ್ಲ, ಎಲ್ಲರೂ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಕ್ರಿಸ್ ಮಸ್ ಅಂದರೆ ಎಲ್ಲರಿಗೂ ಖುಷಿ ಹಂಚೋದು , ಎಲ್ಲರೂ ಸೇಫ್ ಆಗಿರಿ ಖುಷಿ ಖುಷಿಯಾಗಿರಿ, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಎಂದು ನಟಿ ಮೇಘನಾ ರಾಜ್ ಶುಭಾಶಯ ಕೋರಿದ್ದಾರೆ.

ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮ ಕಳೆಗಟ್ಟಿದೆ. ನಿನ್ನೆ ತಡರಾತ್ರಿಯಿಂದಲೇ ನಗರದ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಇನ್ನು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಲ್ಲ ಚರ್ಚ್ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read