ಬಿಜೆಪಿಯಲ್ಲಿ ಹುದ್ದೆ, ಅಧಿಕಾರ ಪಡೆಯಲು ಪುಡಿ ರೌಡಿ, ರೇಪಿಸ್ಟ್ ಆಗಿರಬೇಕು; ಜೈಲಿಗೆ ಹೋಗಿ ಬಂದಿರಬೇಕು: ಬಿ.ಕೆ. ಹರಿಪ್ರಸಾದ್

ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡಿಬೇಕು ಅಂದ್ರೆ ಒಂದೋ ಪುಡಿ ರೌಡಿಗಳಾಗಿರಬೇಕು, ಇಲ್ಲ ರೇಪಿಸ್ಟ್ ಆಗಿರಬೇಕೋ, ಕನಿಷ್ಟ ಪಕ್ಷ ಎರಡ್ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು. ಅಂತವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ ಬಿಜೆಪಿ ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಸ್ಪದವಲ್ಲ, ಯಾವ ನೈತಿಕತೆಯೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬಿಜೆಪಿಯ ಅಧ್ಯಕ್ಷನೇ ಚೆಕ್ ಮೂಲಕ ಲಂಚ ಪಡೆದು ಹುದ್ದೆ ಗಿಟ್ಟಿಸಿಕೊಂಡಿರುವಾಗ, ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ  ಉಳಿದವರದ್ದು ಯತಾ ರಾಜಾ, ತಥಾ ಪಟಾಲಂ ಅಲ್ವೇ ಎಂದು ಪ್ರಶ್ನಿಸಿದ್ದಾರೆ.

ಆರ್.ಎಸ್‌.ಎಸ್. ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ದೇಶದ ಜನರಿಗೆ ಗೊತ್ತಿದೆ. ಆರ್.ಎಸ್.ಎಸ್. ಅಂತರಂಗಗಳು ನರಕದ ಗರ್ಭಗುಡಿಯೊಳಗೆ ಬಚ್ಚಿಟ್ಟಿದ್ದಕ್ಕಿಂತ, ಹೂತಿಟ್ಟಿದ್ದೇ ಹೆಚ್ಚು. ಇಂತಹ ಪಾತಕಿತನಗಳನ್ನು ಬಯಲು ಮಾಡುತ್ತಲೇ ಇರುತ್ತೇನೆ. ಎರಡು ರೂಪಾಯಿಯ ಗತಿಗೇಡಿ ಭಕ್ತರ ಅಪಪ್ರಚಾರಕ್ಕೆ ಕಿವಿಗೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read