ಟಿಎಂಸಿ ಕಾರ್ಯಕರ್ತನನ್ನು ಗುಂಡಿಟ್ಟು ಹತ್ಯೆಗೈದ ದುಷ್ಕರ್ಮಿಗಳು

ಮುಷಿದಾಬಾದ್: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರಕರ್ತನ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಸನಾತನ ಘೋಷ್ ಮೃತ ಟಿಎಂಸಿ ಕಾರ್ಯಕರ್ತ. ಸನಾತನ ಘೋಷ್ ಟಿಸಿಎಂ ಕಾರ್ಯಕರ್ತ ಹಾಗೂ ಹಾಲಿನ ವ್ಯಾಪಾರಿಯಾಗಿದ್ದ ಘಜ್ನಿಪುರದಿಂದ ಪಾರಾ ಗ್ರಾಮದ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಸನಾತನ ಘೋಷ್ ಅವರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ. ಮುರ್ಷಿದಾಬಾದ್ ನಲ್ಲಿ ಈ ಘಟನೆ ನಡೆದಿದೆ.

ಇದು ಬಿಜೆಪಿ ಕೈವಾಡವಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ ಬಿಜೆಪಿ ಆರೋಪವನ್ನು ಅಲ್ಲಗಳೆದಿದೆ. ಗುಂಡಿನ ದಳಿಯಿಂದ ರಕ್ತದ ಮಡುವಲ್ಲಿ ಬಿದ್ದಿದ್ದ ಸನಾತನ ಘೋಷ್ ಅವರನ್ನು ಹರಿಹರಪಾರಾ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಘೋಷ್ ಮೃತಪಟ್ಟಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read