ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ರೀಲ್ಸ್: ಶಾಸಕ ಡುವ್ವಾಡ್ ಶ್ರೀನಿವಾಸ್ ಸಂಗಾತಿ ವಿರುದ್ಧ ಕೇಸ್ ದಾಖಲು

ಹೈದರಾಬಾದ್: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ರೀಲ್ಸ್ ಮಾಡಿದ ಆರೋಪದಲ್ಲಿ ವೈಎಸ್ ಆರ್ ಕಾಂಗ್ರೆಸ್ ಶಾಸಕ ಡುವ್ವಾಡ್ ಶ್ರೀನಿವಾಸ್ ಅವರ ಸಂಗಾತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೇವಾಲಯದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ತಿರುಪತಿ ವೆಂಕಟೇಶ್ವರಸ್ವಾಮಿ ದೇವಾಲಯದ ಮುಂದೆ ರೀಲ್ಸ್ ವಿಡೀಯೋ ಮಾಡಿದ್ದಾರೆ ಎಂದು ಶಾಸಕ ಡುವ್ವಾಡ್ ಶ್ರೀನಿವಾಸ್ ಅವರ ಸಂಗಾತಿ ಮಾದುರಿ ದಿವ್ವಾಳ ವಿರುದ್ಧ ಪೊಲೀಸರು ಕೇಸ್ದಾಖಲಿಸಿದ್ದಾರೆ.

ವಿಜಯದಶಮಿ ಪ್ರಯುಕ್ತ ಶಾಸಕ ಡುವ್ವಾಡ್ ಶ್ರೀನಿವಾಸ್ ಜೊತೆ ದೇವಸ್ಥಾನಕ್ಕೆ ಬಂದಿದ್ದ ಮಾದುರಿ, ದೇವಾಲಯದ ಆವರಣದಲ್ಲಿ ರೀಲ್ಸ್ ವಿಡಿಯೋ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾದುರಿ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಬಗ್ಗೆ ಪೋಸ್ಟ್ ಹಾಕಿದ್ದಾಕ್ಕೆ ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾದುರಿ ದಿವ್ವಾಳ ಶಾಸಕ ಡುವ್ವಾಡ್ ಶ್ರೀನಿವಾಸ್ ಜೊತೆ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read