ತಿರುಪತಿ ತಿಮ್ಮಪ್ಪನ ಭಕ್ತರಿಗೆ ಶಾಕ್: ರೂಂ ಬಾಡಿಗೆ ಭಾರಿ ಹೆಚ್ಚಳ

ತಿರುಪತಿ: ತಿರುಪತಿ ತಿರುಮಲ ವೆಂಕಟೇಶ್ವರನ ದರ್ಶನಕ್ಕೆ ಬರುವ ಭಕ್ತರ ವಸತಿ ಕೊಠಡಿಗಳ ಬಾಡಿಗೆ ದರವನ್ನು ಭಾರಿ ಹೆಚ್ಚಳ ಮಾಡಲಾಗಿದೆ.

ಕೆಲವು ಕೊಠಡಿಗಳಿಗೆ ದುಪ್ಪಟ್ಟು ದರ ವಿಧಿಸಲಾಗಿದೆ. ತಿರುಮಲದ ಪಾಚಜನ್ಯಂ, ಕೌಸ್ತುಭಂ, ವಕುಳಾಮಾತಾ, ನಂದಕಂ ಅತಿಥಿ ಗೃಹಗಳ ಕೊಠಡಿಗಳ ಬಾಡಿಗೆ ದರವನ್ನು 600 ರೂ. ನಿಂದ 1 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.

ನಾರಾಯಣಗಿರಿ ವಿಶ್ರಾಂತಿ ಗೃಹದ ಒಂದು, ಎರಡು, ಮೂರನೇ ಬ್ಲಾಕ್ ನ ಬಾಡಿಗೆಯನ್ನು 1500 ರೂ.ನಿಂದ 1700 ರೂ.ಗೆ ಏರಿಕೆ ಮಾಡಲಾಗಿದೆ. ವಿಶ್ರಾಂತಿ ಗೃಹ 4ರ ಬಾಡಿಗೆ 750 ರೂ.ನಿಂದ 1700 ರೂ.ಗೆ ಏರಿಕೆ ಮಾಡಲಾಗಿದ್ದು, ಕಾರ್ನರ್ ಸೂಟ್ ಗಳ ದರ ಜಿಎಸ್‌ಟಿ ಸೇರಿ 2,200 ರೂ.ಗಳಷ್ಟು ಆಗಿದೆ. ವಿಶೇಷ ಕೊಠಡಿ ಬಾಡಿಗೆ ದರ 2800 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬಾಡಿಗೆ ಜೊತೆಗೆ ಬಾಡಿಗೆ ಮೊತ್ತದಷ್ಟೇ ಠೇವಣಿಯನ್ನು ಭಕ್ತರು ಪಾವತಿಸಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read