ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್; ಟಾಪ್ 10 ಪಟ್ಟಿ ಪ್ರವೇಶಿಸಿದ ಟಿಮ್ ಸೌಥಿ

ನ್ಯೂಜಿಲೆಂಡ್ ನ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವವರ ಟಾಪ್ 10 ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ಟಿಮ್ ಸೌಥಿ ಆರು ಸಿಕ್ಸರ್ ಬಾರಿಸಿದ್ದು, ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 82 ಸಿಕ್ಸರ್ ಬಾರಿಸಿದಂತಾಗಿದೆ. ಈಗಾಗಲೇ 82 ಸಿಕ್ಸರ್ ಬಾರಿಸಿ 10ನೇ ಸ್ಥಾನದಲ್ಲಿರುವ ಮ್ಯಾಥ್ಯೂ ಹೇಡನ್ ಹಾಗೂ ಆಂಡ್ರ್ಯೂ ಪ್ರಿಂಟಾಫ್ ಜೊತೆಗೆ ಟಿಮ್ ಸೌಥಿ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನ ಒಟ್ಟು 2345 ಎಸೆತಗಳಲ್ಲಿ ಟಿಮ್ ಸೌಥಿ 82 ಸಿಕ್ಸರ್ ಬಾರಿಸಿದ್ದು, ಅತಿ ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದ ಕ್ರಿಕೆಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 9593 ಎಸೆತಗಳನ್ನು ಎದುರಿಸಿ ಒಟ್ಟು 109 ಸಿಕ್ಸರ್ ಸಿಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read