ಟಿಕ್‌ ಟಾಕ್ ಸ್ಟಾರ್ ಜೆಹಾನ್‌ ರನ್ನು ಬಲಿ ಪಡೆದ ಮೈಗ್ರೇನ್; ತಲೆನೋವು ಅಂತ ನಿರ್ಲಕ್ಷ್ಯ ಮಾಡುವ ಮುನ್ನ ಹುಷಾರ್

ಮೈಗ್ರೇನ್ ಬಗ್ಗೆ ನೀವು ಕೇಳಿರಬಹುದು. ಈ ತಲೆನೋವು ಸಾಮಾನ್ಯವಾಗಿ ಮಹಿಳೆಯರಿಗೆ ಕಾಡುವುದು ಹೆಚ್ಚು. ಪ್ರಪಂಚದ ಪ್ರತಿ ಏಳನೇ ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಮೈಗ್ರೇನ್ ಅಂದ್ರೆ ತೀಕ್ಷ್ಣರೂಪದ ತಲೆನೋವು ಅಂತಾ ಎಲ್ಲರೂ ಅಂದುಕೊಂಡಿರುತ್ತೇವೆ. ಆದ್ರೆ ಇದೇ ತಲೆನೋವು ಒಬ್ಬರ ಜೀವವನ್ನೂ ತೆಗೆದುಕೊಂಡುಬಿಡಬಹುದು. ಈಗ ಮೈಗ್ರೇನ್‌ನಿಂದಾಗಿ ಟಿಕ್‌ಟಾಕ್ ತಾರೆ ಜೆಹಾನ್ ಥಾಮಸ್ ಮರಣ ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಜೆಹಾನ್ ಥಾಮಸ್ ತಮ್ಮದೇ ಆದ ಫ್ಯಾನ್ ಫಾಲೋವಿಂಗ್ ಹೊಂದಿದ್ದವರು. ಅದರಲ್ಲೂ ಟಿಕ್‌ಟಾಕ್ ಸ್ಟಾರ್ ಅಂತಾನೇ ಇವರು ಫೇಮಸ್ ಆಗಿದ್ದವರು. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಜೆಹಾನ್ ನಿರಂತರವಾಗಿ ಮೈಗ್ರೇನ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇತ್ತೀಚೆಗಷ್ಟೇ ಜೆಹಾನ್‌ನ ಸ್ನೇಹಿತರೊಬ್ಬರು ಅವರ ಸಾವಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

30 ವರ್ಷದ ಜೆಹಾನ್ ಥಾಮಸ್ ಅವರ ಸಾವಿನ ಸುದ್ದಿಯನ್ನ, ಅವರ ಗೆಳೆಯರಾದ ಅಲಿಕ್ಸ್ ಶುಕ್ರವಾರ ತನ್ನ GoFundMe ಸೋಶಿಯಲ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಟಿಕ್‌ಟಾಕ್‌ನಲ್ಲಿ ಏನಿಲ್ಲ ಅಂದರೂ ಸುಮಾರು 72 ಸಾವಿರಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಇಷ್ಟು ಸಾಕಲ್ವೇ ಇವರ ಅಭಿಮಾನಿಗಳು ಎಷ್ಟಿದ್ದಾರೆ ಅನ್ನೊ ಅಂದಾಜು ಮಾಡಬಹುದು.

ಕೆಲವು ವಾರಗಳ ಹಿಂದೆ, ಜೆಹಾನ್ ತಮಗೆ ಕಾಡಿರುವ ಆಫ್ರಿಕ್ ನ್ಯೂರಿಟಿಸ್ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು. ಜೆಹಾನ್ ಥಾಮಸ್ ಅಕಾಲಿಕ ಸಾವಿನಿಂದಾಗಿ ಅವರ ಕುಟುಂಬ ಶಾಕ್‌ನಲ್ಲಿದೆ. ಅದರಲ್ಲೂ ಇಬ್ಬರು ಪುಟಾಣಿ ಮಕ್ಕಳಾದ ಐಸಾಕ್ ಮತ್ತು ಎಲಿಜಾ ಅಮ್ಮನನ್ನ ಕಾಣದೇ ಕಂಗಾಲಾಗಿದ್ದಾರೆ. ಮೈಗ್ರೇನ್ ತಲೆನೋವು ಈಗ ಕೇವಲ ತಲೆನೋವು ಅಂತ ನಿರ್ಲಕ್ಷಿಸುವ ಹಾಗಿಲ್ಲ. ಅದು ಜೀವವನ್ನೇ ತೆಗೆದುಕೊಳ್ಳಬಹುದು ಅನ್ನೊದಕ್ಕೆ ಜೆಹಾನ್ ಥಾಮಸ್ ಅವರ ಸಾವೇ ಸಾಕ್ಷಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read