ಪ್ರವಾಸಿಗರ ಎದುರೇ ಬೇಟೆಯ ಚಾಕಚಕ್ಯತೆ ಪ್ರದರ್ಶಿಸಿದ ಹುಲಿ: ವಿಡಿಯೋ ವೈರಲ್​

ಪ್ರಾಣಿಗಳು ಜಿಂಕೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಬೇಟೆಯಾಡೋದನ್ನ ಡಿಸ್ಕವರಿ, ಅನಿಮಲ್​ ಪ್ಲಾನೆಟ್​ನಂತಹ ಚಾನೆಲ್​ನಲ್ಲಿ ನೋಡಿರುತ್ತೇವೆ. ಆದರೆ ಮಧ್ಯಪ್ರದೇಶದ ಕನ್ಹಾ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳು ಎಲ್ಲರ ಸಮ್ಮುಖದಲ್ಲೇ ಜಿಂಕೆಯನ್ನು ಬೇಟೆಯಾಡಿ ತಿಂದಿದ್ದು ವ್ಯಾಘ್ರಗಳ ಗಮನಾರ್ಹ ಪ್ರದರ್ಶನ ನೋಡಿದ ಜನರು ದಂಗಾಗಿದ್ದಾರೆ.

ಅತ್ಯಂತ ಶಕ್ತಿಯುತ ದೇಹಗಳನ್ನು ಹೊಂದಿರುವ ಹುಲಿಗಳು ಪರಭಕ್ಷಕ ಜೀವಿಗಳಾಗಿವೆ. ಈ ಹುಲಿಗಳು ಸೇರಿ ಜಿಂಕೆಯನ್ನು ಬೇಟೆಯಾಡೋದ್ರಲ್ಲಿ ಯಶಸ್ವಿಯಾಗಿದ್ದವು. ಹುಲಿಯ ಬೇಟೆಯ ಚಾಕಚಕ್ಯತೆಯ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿಯೂ ಸಖತ್​ ವೈರಲ್ ಆಗ್ತಿದೆ.

ಕನ್ಹಾ ಹುಲಿ ಮೀಸಲು ಪ್ರದೇಶವು ಅಭಯಾರಣ್ಯವಾಗಿ ಉಳಿದಿದೆ, ಈ ಕನ್ಹಾ ಅಭಯಾರಣ್ಯದಲ್ಲಿ ನಡೆದ ಈ ಘಟನೆಯ ವಿಡಿಯೋ ಇಂಟರ್ನೆಟ್​ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು ವಿಡಿಯೋ ಮಾಡಿದ ಮಹಿಳೆಯ ದೃಷ್ಟಿಕೋನಕ್ಕೆ ಸಾಥ್​ ನೀಡಿದ್ರೆ ಇನ್ನೂ ಕೆಲವರು ಇವುಗಳನ್ನು ಖಾಸಗಿಯಾಗಿ ಇಡುವುದೇ ಸರಿ ಎಂದು ವಾದಿಸಿದ್ದಾರೆ. ಅನೇಕರು ಈ ಘಟನೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಕಮೆಂಟ್​ ವಿಭಾಗದಲ್ಲಿ ಹೊರಹಾಕಿದ್ದಾರೆ.’

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read