Tiger Claw Case : ಬಿಜೆಪಿ ಮುಖಂಡನಿಗೂ ‘ಹುಲಿ ಉಗುರು’ ಸಂಕಷ್ಟ : ನಿವಾಸಕ್ಕೆ ಅರಣ್ಯಾಧಿಕಾರಿಗಳ ದೌಡು, ಪರಿಶೀಲನೆ

ವಿಜಯಪುರ : ಬಿಗ್ ಬಾಸ್ ಮನೆಯಿಂದ ಶುರುವಾದ ಹುಲಿ ಉಗುರು ಪ್ರಕರಣ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಹಲವು ಕಡೆ ಅರಣ್ಯಾಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.

ಇದೀಗ ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನಿವಾಸಕ್ಕೂ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ವಿಜುಗೌಡ ಪಾಟೀಲ್ ಪುತ್ರ ಶಾಶ್ವತ ಗೌಡ ಪಾಟೀಲ್ ಹುಲಿ ಉಗುರು ಧರಿಸಿರುವ ಆರೋಪದ ಹಿನ್ನೆಲೆ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಪೆಂಡೆಂಟ್ ನಲ್ಲಿ ಹುಲಿ ಉಗುರು ಹಾಕಿರೋ ಪೋಟೋ ವೈರಲ್ ಆಗಿದ್ದವು. ಶಾಶ್ವತಗೌಡ ಪಾಟೀಲ ಹಾಕಿಕೊಂಡಿರೋ ಅಸಲಿ ಹುಲಿ ಉಗುರೋ ನಕಲಿಯೋ ಎಂಬುದನ್ನು ಅರಣ್ಯಾಧಿಕಾರಿಗಳು ಪರೀಕ್ಷೆ ಮಾಡಲಿದ್ದಾರೆ, ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ  ಎಂದು ತಿಳಿದು ಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read