ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತಿಯೇ ತನ್ನ ಶತ್ರು ಅಂದಿದ್ರು ನಟಿ ಮನೀಶಾ…! ಇದರ ಹಿಂದಿತ್ತು ಈ ಕಾರಣ

ಮನಿಶಾ ಕೊಯಿರಾಲಾ ಅವರು ಬಾಲಿವುಡ್‌ನ ಅತ್ಯಂತ ಅಪ್ರತಿಮ ನಟಿಯರಲ್ಲಿ ಒಬ್ಬರು. ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಮನಿಶಾ, ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು. ಆದರೆ, ತಮ್ಮ ವೃತ್ತಿಜೀವನದ ಉತ್ತುಂಗಕ್ಕೆ ಏರುತ್ತಿರುವಾಗ, ಮನಿಷಾ ಅವರ ವೈಯಕ್ತಿಕ ಜೀವನವು ಅಸ್ತವ್ಯಸ್ತವಾಗಿತ್ತು.

1942: ಎ ಲವ್ ಸ್ಟೋರಿ, ಬಾಂಬೆ, ಅಗ್ನಿ ಸಾಕ್ಷಿ, ಗುಪ್ತ್, ದಿಲ್ ಸೆ ಮತ್ತು ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ 53 ವರ್ಷದ ಮನೀಷಾ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಮನೀಶಾ ತನ್ನ ಸಿನಿಮಾದ ಮೂಲಕ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದರೂ, ಆಕೆ ಮಾತ್ರ ತನ್ನ ವೈಯಕ್ತಿಕ ಜೀವನದಲ್ಲಿ ಎಡವಿದ್ದರು.

ಹೌದು, ಮದುವೆಯಾದ ಕೇವಲ ಎರಡು ವರ್ಷಗಳಲ್ಲೇ ಮನೀಶಾ ತನ್ನ ಪತಿಗೆ ವಿಚ್ಛೇದನ ನೀಡಿದ್ದರು. ಮನಿಶಾ ಕೊಯಿರಾಲಾ ಅವರು ನೇಪಾಳಿ ಉದ್ಯಮಿ ಸಾಮ್ರಾಟ್ ದಹಾಲ್ ಅವರೊಂದಿಗೆ 2010 ರಲ್ಲಿ ವಿವಾಹವಾದ್ರು. ಸಾಮ್ರಾಟ್ ಮನೀಶಾ ಅವರಿಗಿಂತ ಏಳು ವರ್ಷ ಚಿಕ್ಕವರು. ಆದರೆ, ಪ್ರೀತಿಯ ಮುಂದೆ ಇದ್ಯಾವುದೂ ಸಮಸ್ಯೆಯಾಗಿರಲಿಲ್ಲ.

ಕಠ್ಮಂಡುವಿನಲ್ಲಿ ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ಇಬ್ಬರೂ ಹಸೆಮಣೆ ಏರಿದ್ದರು. ದಂಪತಿ ತಮ್ಮ ಸಂಬಂಧ ಮತ್ತು ಮದುವೆಯ ಬಗ್ಗೆ ಮೌನವಾಗಿ ಇದ್ದರು. ಹೀಗಾಗಿ ಬಹುತೇಕರು ಇವರ ಮದುವೆಯನ್ನು ಅರೇಂಜ್ಡ್ ಮ್ಯಾರೇಜ್ ಎಂದು ಅಂದುಕೊಂಡಿದ್ದರು. ಮದುವೆಯಾದ ಕೆಲವು ವಾರಗಳ ನಂತರ, ಮನಿಶಾ ಅವರು ತಾವು ಪ್ರೀತಿಸಿ ಮದುವೆಯಾಗಿದ್ದಾಗಿ ತಿಳಿಸಿದ್ದರು. ಫೇಸ್‌ಬುಕ್‌ನಲ್ಲಿ ಸಾಮ್ರಾಟ್‌ ಪರಿಚಯವಾಗಿದ್ದು, ತಕ್ಷಣವೇ ಆತನ ಮೇಲೆ ಪ್ರೀತಿಯ ಮೊಳಕೆಯೊಡೆಯಿತು ಎಂದು ಹೇಳಿದ್ರು.

ಆದರೆ, ಅವರ ದಾಂಪತ್ಯದ ಆನಂದವು ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯ ಆರು ತಿಂಗಳ ನಂತರ, ಮನೀಶಾ ತನ್ನ ಫೇಸ್‌ಬುಕ್ ನಲ್ಲಿ ವೈಯಕ್ತಿಕ ಜೀವನದ ಬಗ್ಗೆ ಬರೆದುಕೊಂಡಿದ್ದರು. ನನ್ನ ಪತಿ ನನ್ನ ಶತ್ರು ಆಗಿದ್ದಾನೆ ಎಂದು ಹೇಳಿದ್ದರು. ಇದು ಅಭಿಮಾನಿಗಳಿಗೆ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೆ ಮನಿಶಾ ಮತ್ತು ಸಾಮ್ರಾಟ್ 2012ರಲ್ಲಿ ವಿಚ್ಛೇದನ ಪಡೆದುಕೊಂಡು ದೂರವಾದ್ರು.

ಅಷ್ಟೇ ಅಲ್ಲದೆ ಮನಿಷಾಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾದ ವರ್ಷವೂ ಇದೇ ಆಗಿತ್ತು. ಆಕೆಯ ವೈಯಕ್ತಿಕ ಜೀವನವು ಹದಗೆಟ್ಟಿದ್ದು ಮಾತ್ರವಲ್ಲದೆ, ಆಕೆಯ ಆರೋಗ್ಯವೂ ಕೆಟ್ಟದ್ದಕ್ಕೆ ತಿರುಗಿತು. ಅಂತಿಮವಾಗಿ ಕ್ಯಾನ್ಸರ್ ಅನ್ನು ಸೋಲಿಸುವಲ್ಲಿ ಮನೀಶಾ ಯಶಸ್ವಿಯಾದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read