ಥಾಣೆ : ಚಲಿಸುತ್ತಿದ್ದ ಶಾಲಾ ವಾಹನದಿಂದ ಬಿದ್ದು ಮೂವರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ವೇಗವಾಗಿ ಬರುತ್ತಿದ್ದ ಶಾಲಾ ವ್ಯಾನಿನಿಂದ ಮೂವರು ಮಕ್ಕಳು ಬಿದ್ದಿದ್ದು, ಚಾಲಕ ವಾಹನ ನಿಲ್ಲಿಸದೆ ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದ ಥಾಣೆಯ ಅಂಬರ್ನಾಥ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅಧಿಕಾರಿಗಳ ಪ್ರಕಾರ, ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮತ್ತೊಬ್ಬನ ತಲೆಗೆ ಗಂಭೀರ ಗಾಯಗಳಾಗಿವೆ. ವ್ಯಾನ್ನ ಹಿಂದಿನ ಬಾಗಿಲು ಇದ್ದಕ್ಕಿದ್ದಂತೆ ತೆರೆಯಿತು. ನಂತರ, ಮೂವರು ವಿದ್ಯಾರ್ಥಿಗಳು ಅದರಿಂದ ಬಿದ್ದಿದ್ದಾರೆ. ಆದರೆ, ಚಾಲಕ ನಿಲ್ಲಿಸದೆ ವ್ಯಾನ್ ಚಲಾಯಿಸಿದ್ದಾನೆ. ಚಾಲಕನಿಗೆ ಘಟನೆ ಬಗ್ಗೆ ಗೊತ್ತಾಗಲಿಲ್ಲ ಅನಿಸುತ್ತದೆ. ಕೂಡಲೇ ಸ್ಥಳೀಯರು ಮಕ್ಕಳ ರಕ್ಷಣೆಗೆ ಧಾವಿಸಿದ್ದಾರೆ. ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
अंबरनाथमध्ये धावत्या स्कूल व्हॅनमधून विद्यार्थी रस्त्यावर पडले; वाहन चालकांसह तिघांवर गुन्हा#Ambernath #SchoolVan #Accident pic.twitter.com/HKu3MuN3N6
— Lokmat (@lokmat) July 7, 2025