ವಿಷ್ಣುವಿನ ಆಶೀರ್ವಾದ ಪಡೆಯಲು ಬಯಸುವವರು ಧರಿಸಿ ಈ ʼಉಂಗುರʼ

ಪ್ರಪಂಚದಾದ್ಯಂತ ಅನೇಕ ಜನರು ವಿವಿಧ ರೀತಿಯ ಉಂಗುರಗಳನ್ನು ಧರಿಸುತ್ತಾರೆ. ಅವುಗಳಲ್ಲಿ ಆಮೆ ಉಂಗುರ ಕೂಡ ಒಂದು. ವಾಸ್ತು ಶಾಸ್ತ್ರದಲ್ಲಿ ಆಮೆ ಬಹಳ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಮನೆಯಲ್ಲಿ ಆಮೆ ಪ್ರತಿಮೆ ಇಡುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆಮೆ ಉಂಗುರ ಧರಿಸುವುದ್ರಿಂದ ಅನೇಕ ಪ್ರಯೋಜನಗಳಿವೆ.

ಆಮೆ ಉಂಗುರವನ್ನು ಧರಿಸುವುದರಿಂದ ಆರ್ಥಿಕ ವೃದ್ಧಿಯಾಗಲಿದೆ. ಈ ಉಂಗುರವನ್ನು ಧರಿಸುವುದರಿಂದ ಲಕ್ಷ್ಮಿಗೆ ಸಂತೋಷವಾಗುತ್ತದೆ. ಆರ್ಥಿಕ ಬಿಕ್ಕಟ್ಟು ಅಥವಾ ನಗದು ಬಿಕ್ಕಟ್ಟ ಶಮನವಾಗುತ್ತದೆ.

ಜಾತಕದಲ್ಲಿ ಕಾಡುವ ದೋಷಗಳಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದ್ರೆ ಆಮೆ ಉಂಗುರ ಧರಿಸುವುದ್ರಿಂದ ಜಾತಕದಲ್ಲಿ ಕಾಡುವ ಎಲ್ಲ ದೋಷಗಳು ನಿವಾರಣೆಯಾಗುತ್ತವೆ.

ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿದ್ದರೆ ಆಮೆ ಉಂಗುರ ಪ್ರಯೋಜನಕಾರಿ. ಮನೆಯ ಪ್ರತಿಯೊಬ್ಬರೂ ಆಮೆ ಉಂಗುರ ಧರಿಸಿದ್ರೆ ಗಲಾಟೆ, ಜಗಳ ಕಡಿಮೆಯಾಗುತ್ತದೆ.

ವಿಷ್ಣುವಿನ ಆಶೀರ್ವಾದ ಪಡೆಯಲು ಬಯಸುವವರು ಈ ಉಂಗುರವನ್ನು ಧರಿಸಬೇಕು. ಕೆಲಸದಲ್ಲಿ, ವ್ಯವಹಾರದಲ್ಲಿ ವ್ಯತ್ಯಯವಾಗ್ತಿದ್ದರೆ ಈ ಉಂಗುರ ಧರಿಸಬೇಕು.

ಪ್ರಕ್ಷುಬ್ಧ ಮನಸ್ಸನ್ನು ಹೊಂದಿರುವವರು ಈ ಉಂಗುರ ಧರಿಸಿದ್ರೆ ಮನಸ್ಸು ಶಾಂತಗೊಳ್ಳುತ್ತದೆ. ಅನಾರೋಗ್ಯದಿಂದ ಬಳಲುವ ಜನರಿಗೆ ಈ ಉಂಗುರ ಪ್ರಯೋಜನಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read