ಭಾರತೀಯ ವಿವಾಹ ಸಮಾರಂಭದಲ್ಲಿ ಗೊಂದಲಗಳಿಲ್ಲದೆ ಯಾವುದೇ ವಿವಾಹ ಕಾರ್ಯಕ್ರಮಗಳು ಪೂರ್ಣವಾಗೋದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ವಿವಾಹದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾರ ಬದಲಿಸುವಾಗ ವಧು-ವರ ಕಪಾಳಕ್ಕೆ ಹೊಡೆದುಕೊಳ್ಳುವುದು ಮುಂತಾದವು ಸಂಭವಿಸುತ್ತಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮನ್ನು ನಗಿಸದೆ ಇರದು.
ಮದುವೆ ಅನ್ನೋದು ಒಂದು ಸಂಭ್ರಮ. ಈ ಸಮಾರಂಭದಲ್ಲಿ ಹಲವಾರು ಘಟನೆಗಳು ನಡೆಯುತ್ತದೆ. ಕೆಲವು ಉಲ್ಲಾಸದಾಯಕವಾಗಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ವರ, ವಧುವಿನ ಮೇಲೆ ಬೀಳುವುದರಲ್ಲಿದ್ದರು. ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ.
ವಧು-ವರ ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳಬೇಕಾದ ವರಮಾಲಾ ಸಮಾರಂಭದಲ್ಲಿ ಇದು ಸಂಭವಿಸಿದೆ. ವಧು-ವರ ಪರಸ್ಪರ ಹೂಮಾಲೆಗಳನ್ನು ಹಾಕುವಾಗ ಸ್ನೇಹಿತರು ಕೀಟಲೆ ಮಾಡಲು ತಪ್ಪಿಸಲು ಮುಂದಾಗಿದ್ದಾರೆ. ವರ, ವಧುವಿಗೆ ಹೂಮಾಲೆ ಹಾಕಬೇಕಾದರೆ ವಧುವನ್ನು ಎತ್ತಿಕೊಳ್ಳುವುದು ಸಾಮಾನ್ಯ. ವರನಿಗೆ ಹೂಮಾಲೆ ಹಾಕಲು ಸ್ನೇಹಿತರು ಆತನನ್ನು ಮೇಲಕ್ಕೆತ್ತುತ್ತಾರೆ.
ಆದರೆ, ಇಲ್ಲಿ ಇನ್ನೇನು ವಧುವಿಗೆ ಹೂಮಾಲೆ ಹಾಕಬೇಕು ಅನ್ನೋವಾಗ ಸ್ನೇಹಿತರು ವರನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಈ ವೇಳೆ ವರ ವಧುವಿನ ಮೇಲೆಯೇ ಬೀಳುತ್ತಾನೆ. ವಧು ಕೂಡಲೇ ಹಿಂದಕ್ಕೆ ಹೆಜ್ಜೆ ಇಟ್ಟಿದ್ರಿಂದ ಬಚಾವ್ ಆಗಿದ್ದಾಳೆ. ಸದ್ಯ, ಈ ಹಾಸ್ಯಾತ್ಮಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಸಮಾರಂಭದ ಇನ್ನೊಂದು ವಿಡಿಯೋದಲ್ಲಿ ವರ ಹೂಮಾಲೆ ಹಾಕುವಾಗ ವಧು ಹಿಂದಕ್ಕೆ ಬಾಗಿರುವ ದೃಶ್ಯದ ವಿಡಿಯೋ ಸಹ ವೈರಲ್ ಆಗಿದೆ. ಈ ದೃಶ್ಯಕ್ಕೆ ಪುಷ್ಪಾ ಸಿನಿಮಾದ ʼಹೂ ಅಂಟವಾʼ ಹಾಡಿನ ಬೀಟ್ ಅನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ.
https://twitter.com/poetuncle/status/1678810855649968130?ref_src=twsrc%5Etfw%7Ctwcamp%5Etweetembed%7Ctwterm%5E1678810855649968130%7Ctwgr%5E9f0d85f0bb5bfe05538fba5fc017845737089b7b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fthisviralvideocontainseverythingyoushouldavoiddoingatvarmalaceremony-newsid-n518377696