ಪ್ರತಿದಿನ ತಿನ್ನಬೇಕು ಈ ತರಕಾರಿ, ಇದರಲ್ಲೂ ಅಡಗಿದೆ ಆರೋಗ್ಯದ ಗುಟ್ಟು…!

ಆಲೂಗಡ್ಡೆಯನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬಹಳ ರುಚಿಕರ ತರಕಾರಿ ಇದು. ಮಕ್ಕಳಿಗಂತೂ ಫೇವರಿಟ್‌. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಫಾಸ್ಟ್ ಫುಡ್‌ನಿಂದ ಹಿಡಿದು ಮನೆಯಲ್ಲಿ ತಯಾರಿಸುವ ಖಾದ್ಯಗಳಿಗೂ ಆಲೂಗಡ್ಡೆ ಬಳಸುತ್ತೇವೆ. ಆಲೂಗೆಡ್ಡೆ ಪರೋಟ, ಸ್ಯಾಂಡ್‌ವಿಚ್‌, ಟಿಕ್ಕಿ ಇವೆಲ್ಲ ಬಹಳ ಫೇಮಸ್‌.

ಯಾವ ತರಕಾರಿಯ ಜೊತೆಗೆ ಬೆರೆಸಿದರೂ ತಿನಿಸುಗಳ ರುಚಿಯನ್ನು ದುಪ್ಪಟ್ಟು ಮಾಡಬಲ್ಲದು ಆಲೂಗಡ್ಡೆ. ಆದರೆ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಅನೇಕರು ಭಾವಿಸಿದ್ದಾರೆ. ಆಹಾರದಲ್ಲಿ ಆಲೂಗಡ್ಡೆಯನ್ನು ಸರಿಯಾದ ರೀತಿಯಲ್ಲಿ ಸೇರಿಸಿದರೆ ಅದು ತುಂಬಾ ಆರೋಗ್ಯಕರ ಮತ್ತು ಪ್ರಯೋಜನಕಾರಿಯಾಗಿದೆ.

ಚರ್ಮಕ್ಕೆ ಹೊಳಪು – ವಿಟಮಿನ್ ಬಿ6 ಆಲೂಗಡ್ಡೆಯಲ್ಲಿ ಕಂಡುಬರುತ್ತದೆ.  ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ತಿನ್ನುವುದರಿಂದ ಚರ್ಮವು ಹೊಳೆಯುತ್ತದೆ. ಅಷ್ಟೇ ಅಲ್ಲ ಆಲೂಗೆಡ್ಡೆಯ ರಸವನ್ನು ಹಚ್ಚಿಕೊಂಡರೆ ಟ್ಯಾನಿಂಗ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು. ಆಲೂಗಡ್ಡೆ ವೃದ್ಧಾಪ್ಯವನ್ನು ತಡೆಯಬಲ್ಲದು. ಆಲೂಗೆಡ್ಡೆ ರಸವನ್ನು ವಾರಕ್ಕೆ 3 ರಿಂದ 4 ಬಾರಿ ಮುಖಕ್ಕೆ ಹಚ್ಚುವುದರಿಂದ ಸೂಕ್ಷ್ಮ ಗೆರೆಗಳು, ಸುಕ್ಕುಗಳು ಮತ್ತು ನಸುಕಂದು ಮಚ್ಚೆಗಳು ಕಡಿಮೆಯಾಗುತ್ತವೆ.

ಹೃದಯವನ್ನು ಆರೋಗ್ಯವಾಗಿರಿಸುತ್ತದೆಆಲೂಗಡ್ಡೆ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಲೂಗಡ್ಡೆಯಲ್ಲಿ ನಾರಿನಂಶವಿದ್ದು, ನಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸದಂತೆ ತಡೆಯುತ್ತದೆ. ಈ ಮೂಲಕ ಆಲೂಗಡ್ಡೆ ಸೇವನೆಯಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಕೂಡ ಆಲೂಗಡ್ಡೆಯಲ್ಲಿ ಕಂಡುಬರುತ್ತದೆ.

ಮಲಬದ್ಧತೆಯಿಂದ ಪರಿಹಾರಆಲೂಗಡ್ಡೆಯನ್ನು ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಬಹುದು. ಏಕೆಂದರೆ ಇದರಲ್ಲಿ ಸಾಕಷ್ಟು ಫೈಬರ್‌ ಇರುತ್ತದೆ. ಆಲೂಗಡ್ಡೆ ತಿಂದರೆ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಅತಿಸಾರ ಅಥವಾ ಇತರ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಆಲೂಗಡ್ಡೆಯನ್ನು ಸೇವಿಸುವುದರಿಂದ ಅದನ್ನು ಗುಣಪಡಿಸಬಹುದು. ಆಲೂಗಡ್ಡೆಯಲ್ಲಿ ಸಾಕಷ್ಟು ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ, ಇದು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read