ಮಕ್ಕಳಿಲ್ಲದ ಪುರುಷರಿಗೆ ಭರವಸೆಯ ಆಶಾಕಿರಣ ಈ ತರಕಾರಿ…..!  

ಪ್ರಪಂಚದಾದ್ಯಂತ ಪುರುಷರಲ್ಲಿ ಬಂಜೆತನದ ಸಮಸ್ಯೆಯಿದೆ. ಇದರಿಂದಾಗಿ ತಂದೆಯಾಗಬೇಕೆಂಬ ಅನೇಕರ ಬಯಕೆ ಈಡೇರುವುದೇ ಇಲ್ಲ. ಅನೇಕ ಬಾರಿ ವಿವಾಹಿತ ಪುರುಷರು ಮಕ್ಕಳಿಲ್ಲದ ಕಾರಣ ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು ಪುರುಷರಿಗೆ ತರಕಾರಿಯಲ್ಲಿ ಸುಲಭದ ಪರಿಹಾರವಿದೆ.

ನುಗ್ಗೇಕಾಯಿಯಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ನೀವು ಕೇಳಿರಬಹುದು. ಪ್ರೊಟೀನ್, ಎಂಟಿಒಕ್ಸಿಡೆಂಟ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ ಮತ್ತು ಸತುವಿನ ಅಂಶ ನುಗ್ಗೇಕಾಯಿಯಲ್ಲಿದೆ. ನುಗ್ಗೇಕಾಯಿ, ನುಗ್ಗೇ ಎಲೆಗಳು ಮತ್ತು ಕಾಂಡ ಎಲ್ಲವೂ  ಔಷಧೀಯ ಗುಣಗಳನ್ನು ಹೊಂದಿವೆ. ವಿವಾಹಿತ ಪುರುಷರು ಈ ತರಕಾರಿಯನ್ನು ತಿನ್ನಬೇಕು. ಬಂಜೆತನ ನಿವಾರಣೆಗೆ ಇದು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಬಂಜೆತನಕ್ಕೆ ಪರಿಹಾರ- ಅನೇಕ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಿರುತ್ತದೆ, ವೀರ್ಯಾಣು ಗುಣಮಟ್ಟದಲ್ಲಿ ಕುಸಿತವಿರುತ್ತದೆ. ಅವರ ದೇಹದಲ್ಲಿ ವೀರ್ಯ ಉತ್ಪಾದನೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹೀಗಿದ್ದಾಗ ನುಗ್ಗೇಕಾಯಿ ಮತ್ತು ನುಗ್ಗೇಎಲೆಗಳನ್ನು ಸೇವನೆ ಮಾಡಬೇಕು. ಇವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕಾರಣ ಬಹಳ ಉಪಯುಕ್ತವಾಗಿವೆ. ಇದು ವೀರ್ಯ ಡಿಎನ್‌ಎಗೆ ಹಾನಿ ಮಾಡುವ ಆಕ್ಸಿಡೇಟಿವ್ ಪ್ರಕ್ರಿಯೆಯನ್ನು ತಡೆಯುತ್ತದೆ. ನುಗ್ಗೇಕಾಯಿ ಬಂಜೆತನವನ್ನು ದೂರಮಾಡಿ ತಂದೆಯಾಗುವ ಸಾಮರ್ಥ್ಯವನ್ನು ಪುರುಷರಲ್ಲಿ ಹೆಚ್ಚಿಸುತ್ತದೆ.

ಲೈಂಗಿಕ ಬಯಕೆ ಹೆಚ್ಚಳಅಮೇರಿಕನ್ ಜರ್ನಲ್ ಆಫ್ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ನುಗ್ಗೇಕಾಯಿ ಕಾಮೋತ್ತೇಜಕ ಗುಣಗಳನ್ನು ಹೊಂದಿದೆ. ಇದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪುರುಷರಲ್ಲಿ ಕಾಮಾಸಕ್ತಿ ಕೂಡ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read