ಹಲವು ಕಾಯಿಲೆಗಳಿಗೆ ರಾಮಬಾಣ ಈ ತರಕಾರಿ

ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿ ಸೇವಿಸುವಂತೆ ವೈದ್ಯರು ಸೂಚಿಸ್ತಾರೆ. ಹಸಿರು ತರಕಾರಿಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವುಗಳಲ್ಲಿ ಬಹು ಉಪಯೋಗಿ ತರಕಾರಿಗಳಲ್ಲೊಂದು ನುಗ್ಗೇಕಾಯಿ. ನುಗ್ಗೇಕಾಯಿ ಎಲೆಗಳು ಹಾಗೂ ಹೂವನ್ನು ಕೂಡ ಔಷಧಕ್ಕೂ ಬಳಸಲಾಗುತ್ತದೆ.

ರಕ್ತದೊತ್ತಡ ಇರುವವರಿಗೆ ನುಗ್ಗೇಕಾಯಿ ಸೇವನೆ ಪ್ರಯೋಜನಕಾರಿ. ಇದನ್ನು ತಿನ್ನುವುದರಿಂದ ದೇಹದ ಶಕ್ತಿಯ ಮಟ್ಟ ಕಾಯ್ದುಕೊಳ್ಳಬಹುದು. ನುಗ್ಗೇಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ. ನುಗ್ಗೇಕಾಯಿ ಎಲೆಗಳನ್ನು ಪೇಸ್ಟ್‌ ಮಾಡಿ ಅದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ತ್ವಚೆಯು ಯಂಗ್ ಆಗಿ ಉಳಿಯುತ್ತದೆ. ಫೋಲಿಕ್ ಆಸಿಡ್ ಮತ್ತು ಅಮೈನೋ ಆಮ್ಲಗಳು ನುಗ್ಗೇಕಾಯಿಯಲ್ಲಿವೆ.

ಕೂದಲು ಉದುರುವಿಕೆ ಸಮಸ್ಯೆ ಇದ್ದರೆ ನುಗ್ಗೇಕಾಯಿ ಎಲೆಗಳನ್ನು ಬಳಸಬೇಕು. ನುಗ್ಗೇಕಾಯಿ ಸೊಪ್ಪನ್ನು ಒಣಗಿಸಿ ಅದನ್ನು ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು ಬೆರೆಸಿ ಪೇಸ್ಟ್‌ ಮಾಡಿಕೊಂಡು ಅದನ್ನು ಕೂದಲಿಗೆ ಹಚ್ಚಿ. ನುಗ್ಗೇಕಾಯಿ ಎಲೆಗಳ ಪುಡಿಯನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಹೆಚ್ಚು ಪರಿಣಾಮಕಾರಿ. ಪೇಸ್ಟ್ ಅನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೇ ಬಿಡಬೇಕು, ಲಘುವಾಗಿ ಮಸಾಜ್‌ ಮಾಡಿ ನಂತರ ಶಾಂಪೂವಿನಿಂದ ತಲೆ ತೊಳೆದುಕೊಳ್ಳಿ.

ಕೆಲವರ ತ್ವಚೆಯು ಒಣಗುತ್ತದೆ, ಬಿರುಕು ಬಿಡುತ್ತದೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣುತ್ತಾರೆ. ಒಣ ತ್ವಚೆ ಇರುವವರಿಗೆ ನುಗ್ಗೇಕಾಯಿ ಬೀಜಗಳ ಎಣ್ಣೆ ರಾಮಬಾಣವಿದ್ದಂತೆ. ನುಗ್ಗೇಕಾಯಿ ಬೀಜಗಳಿಂದ ಮಾಡಿದ ಎಣ್ಣೆ ನಮ್ಮ ತ್ವಚೆಯನ್ನು ಹೈಡ್ರೇಟ್‌ ಮಾಡುತ್ತದೆ. ಅದರಲ್ಲಿ  ಫೋಲಿಕ್ ಆಮ್ಲ ಮತ್ತು ಅಮೈನೋ ಆಮ್ಲ ಸಮೃದ್ಧವಾಗಿವೆ, ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read