ವಯಸ್ಸಾದರೂ ಹರೆಯದವರಂತೆ ಕಾಣಲು ಸಹಾಯಕ ಈ ಉಪಾಯ

ಕಾಂತಿಯುತ ತ್ವಚೆ ಹೊಂದಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಇದಕ್ಕಾಗಿಯೇ ಮಹಿಳೆಯರು ಪಾರ್ಲರ್​ಗಳಿಗೆ ತೆರಳಿ ಸಾವಿರಾರು ರೂಪಾಯಿಯನ್ನ ವ್ಯಯಿಸುತ್ತಾರೆ.

ಅದರಲ್ಲೂ ವಯಸ್ಸಾದ ಬಳಿಕ ಮುಖ ಸುಕ್ಕಾದರಂತೂ ಯಾವ ಕ್ರೀಂ ಹಚ್ಚಿದರೂ ಸಹ ಮುಖದ ಕಾಂತಿ ವಾಪಸ್​ ಸಿಗೋದು ಕಷ್ಟವೇ. ಆದರೆ ನೀವು ಮನೆಯಲ್ಲಿರೋ ಕೆಲ ವಸ್ತುಗಳನ್ನ ಬಳಸಿ 45ರ ಹರೆಯದಲ್ಲೂ 25 ವಯಸ್ಸಿನ ಕಾಂತಿಯನ್ನ ಮರಳಿ ಪಡೆಯಬಹುದಾಗಿದೆ.

ಮುಖ ಸುಕ್ಕುಗಟ್ಟುವ ಸಮಸ್ಯೆಗೆ ಕೋಕಾ ಪೌಡರ್​ ನಿಮಗೆ ಉತ್ತಮ ಪ್ರಯೋಜನ ನೀಡಬಲ್ಲದು. ಇದು ಮುಖದಲ್ಲಿ ಡೆಡ್​ ಸ್ಕಿನ್​​ಗಳನ್ನ ತೆಗೆಯೋದು ಮಾತ್ರವಲ್ಲದೇ ಚರ್ಮವನ್ನ ಬಿಗಿ ಮಾಡುತ್ತೆ.

1 ಚಮಚ ಕೋಕಾ ಪೌಡರ್, 1/2 ಚಮಚ ಮೊಸರು, 1/2 ಚಮಚ ಆಲೋವೆರಾ ಜೆಲ್​ ಇವು ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​​ ಮಾಡಿಕೊಳ್ಳಿ. ಈ ಪೇಸ್ಟ್​ನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ಇದಾದ ಬಳಿಕ ಬೆಚ್ಚನೆಯ ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ. ನಂತರ ಮುಖಕ್ಕೆ ಹೊಂದುವ ಮಾಯಶ್ಚರೈಸರ್​ನ್ನು ಹಚ್ಚಿಕೊಳ್ಳಿ. ಈ ಫೇಸ್​ ಮಾಸ್ಕ್​ನ್ನು ವಾರಕ್ಕೆ ಎರಡು ಬಾರಿ ಹಾಕಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read