ಸಕಾರಾತ್ಮಕ ಶಕ್ತಿ ವೃದ್ಧಿಸುತ್ತೆ ಗಂಗಾ ಜಲದ ಈ ಒಂದು ‘ಉಪಾಯ’

ಜಾತಕದಲ್ಲಿ ದೋಷವಿರುವ ಜೊತೆಗೆ ವಾಸ್ತು ದೋಷ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿರುವ ಕೆಲ ಉಪಾಯಗಳು ಜಾತಕ ದೋಷದ ಜೊತೆಗೆ ವಾಸ್ತು ದೋಷವನ್ನು ನಿವಾರಣೆ ಮಾಡುತ್ತದೆ. ದೇವಾನುದೇವತೆಗಳನ್ನು ಆಕರ್ಷಿಸಲು ಇದು ನೆರವಾಗುತ್ತದೆ.

ದೇವಾನುದೇವತೆಗಳನ್ನು ಆಕರ್ಷಿಸಲು ಹಾಗೂ ವಾಸ್ತು ದೋಷವನ್ನು ನಿವಾರಣೆ ಮಾಡಲು ಬೆಳಿಗ್ಗೆ-ಸಂಜೆ ಪೂಜೆ ಮಾಡಬೇಕು. ಪೂಜೆ ಜೊತೆಗೆ ಮನೆಯ ಎಲ್ಲ ಭಾಗಗಳಿಗೆ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿ. ಇದು ಮನೆಯ ಎಲ್ಲ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.

ದೇವರ ಮನೆಯಲ್ಲಿ ಸಂಜೆ ಹಾಗೂ ಬೆಳಿಗ್ಗೆ ಕರ್ಪೂರವನ್ನು ಹಚ್ಚಿ. ಕರ್ಪೂರದ ಸುವಾಸನೆ ದೇವಾನುದೇವತೆಗಳನ್ನು ಆಕರ್ಷಿಸುತ್ತದೆ.

ಮನೆಯ ಮುಖ್ಯ ದ್ವಾರಕ್ಕೆ ಅಶೋಕದ ಎಲೆಯನ್ನು ಕಟ್ಟಿ. ಇದು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

 ಮನೆಯಲ್ಲಿ ವಾಸ್ತು ದೋಷ ಯಂತ್ರವನ್ನು ಇಡಿ. ಯಂತ್ರದಿಂದ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಮನೆ ಒಡೆಯದೆ ವಾಸ್ತು ದೋಷ ಪರಿಹಾರ ಯಂತ್ರದಿಂದ ದೋಷ ಕಡಿಮೆ ಮಾಡಬಹುದು.

ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಶ್ರೀ ಯಂತ್ರವನ್ನು ದೇವರ ಮನೆಯಲ್ಲಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read