Mysore Dasara : ಈ ಬಾರಿಯೂ ದಸರಾ ಅಂಬಾರಿ ಹೊರಲಿದ್ದಾನೆ ‘ಅಭಿಮನ್ಯು’ : ಸಚಿವ ಈಶ್ವರ ಖಂಡ್ರೆ ಘೋಷಣೆ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರ ಸಕಲ ಸಿದ್ದತೆ ಕೈಗೊಳ್ಳುತ್ತಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಈ ಬಾರಿಯೂ ಆನೆ ‘ಅಭಿಮನ್ಯು’ ಮೈಸೂರು ದಸರಾ ಅಂಬಾರಿ ಹೊರಲಿದ್ದಾನೆ ಎಂದು ಸಚಿವ ಈಶ್ವರ ಖಂಡ್ರೆ ಘೋಷಣೆ ಮಾಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಬಾರಿಯೂ ಆನೆ ‘ಅಭಿಮನ್ಯು’ ಮೈಸೂರು ದಸರಾ ಅಂಬಾರಿ ಹೊರಲಿದ್ದಾನೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಇಂದು ಗಜ ಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟಿದ್ದೇವೆ.. ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಅಂಜನ್ ಈ ಬಾರಿ ದಸರಾಗೆ ಹೊಸ ಆನೆ ಸೇರ್ಪಡೆಯಾಗಿದೆ ಎಂದರು.

ಒಂದುವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ.. ನಾಡ ಅಧಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.ಕಾಡಾನೆ ದಾಳಿಯಿಂದ  ಅರಣ್ಯ ಇಲಾಖೆ ಸಿಬ್ಬಂದಿ  ವೆಂಕಟೇಶ್  ಮೃತಪಟ್ಟಿದ್ದು, ಈ ಘಟನೆಯ ಸಂಪೂರ್ಣ ತನಿಖೆಗೆ ಆದೇಶ ಹೊರಡಿಸಿದ್ದೇನೆ ಎಂದರು.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read