ಬಡವರನ್ನೂ ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ ಮನೆಯ ಬಾಗಿಲಲ್ಲಿ ಕಟ್ಟಿದ ಈ ವಸ್ತು…!

ಆರ್ಥಿಕ ಸಮಸ್ಯೆ ಬಡ ಮತ್ತು ಮಧ್ಯಮವರ್ಗದವರಲ್ಲಿ ಸರ್ವೇಸಾಮಾನ್ಯ. ಅನೇಕ ಬಾರಿ ಕಠಿಣ ಪರಿಶ್ರಮ ಮತ್ತು  ಪ್ರಯತ್ನಗಳ ಹೊರತಾಗಿಯೂ ಹಣಕಾಸಿನ ಸಮಸ್ಯೆ ಪರಿಹಾರವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದೃಷ್ಟವನ್ನು ತನ್ನ ಕಡೆಗೆ ಸೆಳೆಯಲು ಕೆಲವು ವಿಶೇಷ ಪ್ರಯತ್ನಗಳನ್ನು ಮಾಡಬೇಕು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯನ್ನು ಮೆಚ್ಚಿಸಲು ವಾಸ್ತುವಿನ ಸೂತ್ರಗಳನ್ನು ಪಾಲಿಸಬೇಕು. ಶ್ರೀಮಂತರಾಗಲು ಅಂತಹ ಖಚಿತವಾದ ಮಾರ್ಗವೊಂದಿದೆ. ಅದಕ್ಕೆ ಬೇಕಾಗುವ ಪ್ರಮುಖ ವಸ್ತುವೆಂದರೆ ತುಳಸಿ ಗಿಡದ ಬೇರು.

ಅದ್ಭುತಗಳನ್ನು ಮಾಡುತ್ತದೆ ತುಳಸಿ ಬೇರು!

ತುಳಸಿಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ.  ಭಗವಾನ್ ವಿಷ್ಣುವು ತುಳಸಿಯನ್ನು ಪ್ರೀತಿಸುತ್ತಾನೆ ಎಂಬ ಪ್ರತೀತಿ ಇದೆ. ತುಳಸಿ ಪೂಜೆ ಮತ್ತು ತುಳಸಿಗೆ ಸಂಬಂಧಿಸಿದ ಪರಿಹಾರಗಳನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು. ತುಳಸಿ ಎಲೆ, ಬೇರು, ಕಾಂಡ ಎಲ್ಲವನ್ನೂ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ಪೂಜಿಸುವ ಮನೆಯಲ್ಲಿ ತಾಯಿ ಲಕ್ಷ್ಮಿ ಯಾವಾಗಲೂ ನೆಲೆಸುತ್ತಾಳೆ. ಹಣದ ಕೊರತೆ ಎಂದಿಗೂ ಇರುವುದಿಲ್ಲ.

ತುಳಸಿ ಬೇರಿಗೆ ನಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿಯಿದೆ. ಇದಕ್ಕಾಗಿ ಮನೆಯ ಮುಖ್ಯ ಬಾಗಿಲಿಗೆ ಒಣಗಿದ ತುಳಸಿ ಬೇರನ್ನು ಕಟ್ಟಿಬೇಕು. ತುಳಸಿ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಬಾಗಿಲಿಗೆ ನೇತು ಹಾಕಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವು ಮನೆಯಲ್ಲಿ ಉಳಿಯುತ್ತದೆ. ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ. ವಾಸ್ತು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಸಮೃದ್ಧಿ ಇರುತ್ತದೆ. ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಮತ್ತು ಸಂಪತ್ತು ಹೆಚ್ಚುತ್ತಲೇ ಇರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read