ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಧ ಬೆಲೆಯಲ್ಲಿ ಟೊಮೆಟೊ ಮಾರಾಟ; ಒಬ್ಬರಿಗೆ 1 ಕೆಜಿ ಖರೀದಿಗೆ ಅವಕಾಶ

ಚೆನ್ನೈ: ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.

82 ಪಿಡಿಎಸ್ ಅಂಗಡಿಗಳಲ್ಲಿ ಟೊಮೆಟೊ ಕೆಜಿಗೆ 60 ರೂ. ನಿಗದಿಪಡಿಸಿದ್ದು, ಪ್ರತಿ ವ್ಯಕ್ತಿಗೆ 1 ಕೆಜಿ ಮಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ರಾಜ್ಯದ ನಾಗರಿಕ ಸರಬರಾಜು ಇಲಾಖೆ ಮೂಲಗಳು ತಿಳಿಸಿವೆ.

ತಮಿಳುನಾಡು ಶೀಘ್ರದಲ್ಲೇ ಪಡಿತರ ಅಂಗಡಿಗಳ ಮೂಲಕ ಟೊಮೆಟೊ ಮಾರಾಟವನ್ನು ಪ್ರಾರಂಭಿಸಲಿದೆ. ತಮಿಳುನಾಡು ಸಹಕಾರಿ ಸಚಿವ ಎಸ್. ಪೆರಿಯಕರುಪ್ಪನ್ ಅವರು ಟೊಮೇಟೊ ಮಾರಾಟಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಅಂಶಗಳನ್ನು ಚರ್ಚಿಸಲು ರಾಜ್ಯ ಸಚಿವಾಲಯದಲ್ಲಿ ಸಭೆ ನಡೆಸಿದ್ದರು.

ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದ್ದರೆ, ಗ್ರಾಹಕರಿಗೆ ತೊಂದರೆಯಾಗದಂತೆ ಹೆಚ್ಚಿನ ಉತ್ಪನ್ನಗಳನ್ನು ಖರೀದಿಸಲು ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಜ್ಯ ಸರ್ಕಾರವು ಮುಂದಿನ ಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಫಾರ್ಮ್ ಫ್ರೆಶ್ ಔಟ್‌ಲೆಟ್‌ಗಳ ಜೊತೆಗೆ ಪಡಿತರ ಅಂಗಡಿಗಳ ಮೂಲಕ ಟೊಮೆಟೊ ಮಾರಾಟ ಮಾಡಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read