ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ನಮ್ಮ ಈ ಸಣ್ಣ ತಪ್ಪು…!

ಯಾರು ನೆಮ್ಮದಿಯಿಂದ ನಿದ್ರಿಸಬಲ್ಲರೋ ಅವರೇ ಅತ್ಯಂತ ಸುಖಜೀವಿಗಳು ಎಂಬ ಮಾತಿದೆ. ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ನಿದ್ದೆ ಮತ್ತು ಆರೋಗ್ಯಕ್ಕೆ ನಿಕಟ ಸಂಬಂಧವಿದೆ. ನಿದ್ರೆಯ ಕೊರತೆಯಿಂದಾಗಿ ಅನೇಕ ರೀತಿಯ ಕಾಯಿಲೆಗಳು ಬರಬಹುದು. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ನಿದ್ರಿಸಬೇಕು, ಇಲ್ಲದೇ ಹೋದಲ್ಲಿ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ನಿದ್ರೆಯ ಕೊರತೆಯಿಂದಾಗಿ, ಸೋಂಕುಗಳಿಂದ ರಕ್ಷಿಸಲೆಂದೇ ದೇಹದಲ್ಲಿ ಇರುವ ಪ್ರತಿಕಾಯಗಳ ಸಾಮರ್ಥ್ಯವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲ ರೋಗನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ದುರ್ಬಲವಾದಾಗ ಸ್ಥೂಲಕಾಯತೆ, ಮಧುಮೇಹ, ಹೃದ್ರೋಗ, ಅಧಿಕ ಬಿಪಿ ಮುಂತಾದ ಅನೇಕ ರೋಗಗಳು ಮನೆ ಮಾಡುತ್ತವೆ.

ನಿದ್ರೆಯ ಕೊರತೆಯಿಂದಾಗಿ ನಿದ್ರಾಹೀನತೆಯ ಅಪಾಯವೂ ಹೆಚ್ಚಾಗುತ್ತದೆ. ಸ್ವಲ್ಪ ಸಮಯದ ನಂತರ ಇದು ಗಂಭೀರ ಕಾಯಿಲೆಯ ರೂಪವನ್ನು ತೆಗೆದುಕೊಳ್ಳುತ್ತದೆ. ನಿದ್ರೆಯ ಕೊರತೆಯಿಂದಾಗಿ ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ. ದೇಹಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಇಲ್ಲದೇ ಹೋದಲ್ಲಿ ಕೆಟ್ಟ ಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸುತ್ತವೆ, ಇದು ಸ್ವಲ್ಪ ಸಮಯದ ನಂತರ ಕ್ಯಾನ್ಸರ್ ರೂಪವನ್ನು ಪಡೆಯುತ್ತದೆ.

ನಿದ್ರೆಯ ಕೊರತೆಯಿಂದ ಹಾರ್ಮೋನ್ ಅಸಮತೋಲನದ ಅಪಾಯವೂ ಇದೆ. ನಿದ್ರೆ ಕಡಿಮೆಯಾದಾಗ ದೇಹದಲ್ಲಿ ಹಾರ್ಮೋನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ನಾವು ಒತ್ತಡಕ್ಕೆ ಒಳಗಾಗುತ್ತೇವೆ. ಇದು  ನೊರ್ಪೈನ್ಫ್ರಿನ್ ಮತ್ತು ಕಾರ್ಟಿಸೋಲ್ ಬಿಡುಗಡೆಯಾಗುವಂತೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read