ಮರೆವಿನ ಸಮಸ್ಯೆಗೆ ಪರಿಹಾರ ಈ ʼರುದ್ರಾಕ್ಷಿʼ

ಎಷ್ಟೇ ಓದಿದ್ರೂ ಮಗು ಎಲ್ಲವನ್ನೂ ಮರೆಯುತ್ತೆ. ಫಲಿತಾಂಶ ಚೆನ್ನಾಗಿ ಬರಲ್ಲ. ವಿದ್ಯಾಭ್ಯಾಸ ತಲೆಗೆ ಹಿಡಿಯಲ್ಲ ಅಂತಾ ಪಾಲಕರು ಚಿಂತೆಗೆ ಬೀಳ್ತಾರೆ. ಆದ್ರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಗಣೇಶ ರುದ್ರಾಕ್ಷಿ ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಬೇಕಾದ್ರೆ ಬುಧ ಗ್ರಹ ಬಲವಾಗಿರಬೇಕು. ಬುಧ ಗ್ರಹ ಬಲವಾಗಿದ್ದರೆ ಸಾಮಾನ್ಯ ಪ್ರಯತ್ನದಿಂದಲೂ ಹೆಚ್ಚಿನ ಫಲಿತಾಂಶ ಪಡೆಯಬಹುದು. ಆದ್ರೆ ಬುಧ ದುರ್ಬಲನಾಗಿದ್ದರೆ ಎಷ್ಟು ಕಷ್ಟಪಟ್ಟರೂ ಯಶಸ್ಸು ಲಭಿಸುವುದಿಲ್ಲ.

ಗಣೇಶ ರುದ್ರಾಕ್ಷಿ ಧರಿಸುವುದ್ರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಏಕಾಗ್ರತೆ ವೃದ್ಧಿಯಾಗುವ ಜೊತೆಗೆ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಬರವಣಿಗೆ ಶಕ್ತಿಯಲ್ಲಿಯೂ ವೃದ್ಧಿಯಾಗುತ್ತದೆ. ಈ ಹಿಂದೆ ಕಡಿಮೆ ಅಂಕ ಪಡೆಯುತ್ತಿದ್ದ ವಿದ್ಯಾರ್ಥಿಗಳು ಗಣೇಶ ರುದ್ರಾಕ್ಷಿ ಧರಿಸಿದ ನಂತ್ರ ಹೆಚ್ಚಿನ ಅಂಕ ಪಡೆಯುತ್ತಾರೆ.

ಗಣೇಶ ರುದ್ರಾಕ್ಷಿ ಧರಿಸುವ ಮೊದಲು ಹಸುವಿನ ಹಾಲಿನಲ್ಲಿ ತೊಳೆದು ಪೂಜೆ ಮಾಡಬೇಕು. ಹಸಿರು ದಾರದಲ್ಲಿ ಗಣೇಶ ರುದ್ರಾಕ್ಷಿಯನ್ನು ಧರಿಸಬೇಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read