ರೆಸ್ಟಾರೆಂಟ್​ನಲ್ಲಿ ಭರ್ಜರಿ ಊಟ ಮಾಡಿದ ಬಳಿಕ ನಿದ್ರೆ ಮಾಡಬೇಕೆಂದೆನಿಸುತ್ತದೆಯೇ…..? ಇಲ್ಲಿದೆ ಇದಕ್ಕೆ ಅವಕಾಶ

ರೆಸ್ಟಾರೆಂಟ್​ನಲ್ಲಿ ನಿಮ್ಮಿಷ್ಟದ ಖಾದ್ಯಗಳನ್ನೆಲ್ಲ ತಿಂದ ಬಳಿಕ ಸಣ್ಣ ನಿದ್ರೆ ಮಾಡೋಣ ಎಂದೆನಿಸುವುದು ಸಹಜ. ಆದರೆ ಹೋಟೆಲ್​ಗಳಲ್ಲಿ ಇಂತಹ ಸೌಕರ್ಯಗಳೆಲ್ಲ ಇರೋದಿಲ್ಲ. ಆದರೆ ಜೋರ್ಡಾನ್​​ನ ರೆಸ್ಟಾರೆಂಟ್​​​​ವೊಂದರಲ್ಲಿ ನೀವು ಚೆನ್ನಾಗಿ ಊಟ ಮಾಡಿದ ಬಳಿಕ ಶಾಂತಿಯುತವಾಗಿ ನಿದ್ರೆ ಮಾಡಬಹುದಾಗಿದೆ. ಜೋವಾರ್ಡ್​ನ ರಾಜಧಾನಿ ಅಮ್ಮನ್​​​ನಲ್ಲಿರುವ ಮೋವಾಬ್​ ಹೆಸರಿನ ರೆಸ್ಟಾರೆಂಟ್​ನಲ್ಲಿ ನಿಮಗೆ ಈ ವಿಶೇಷ ಸೌಕರ್ಯ ಸಿಗಲಿದೆ.

ಜೋರ್ಡಾನ್​​ನ ರಾಷ್ಟ್ರೀಯ ಖಾದ್ಯವಾದ ಮನ್ಸಾಫ್​​ನ್ನು ಬಡಿಸಿದ ಬಳಿಕ ಹವಾನಿಯಂತ್ರಿತ ಕೋಣೆಗಳಲ್ಲಿ ನಿಮಗೆ ನಿದ್ರಿಸುವ ಅವಕಾಶ ಸಿಗಲಿದೆ. ರೆಸ್ಟಾರೆಂಟ್​ನ ಸಹ ಮಾಲೀಕರಾಗಿರುವ ಓಮರ್​​ ಎಂಬೈದೀನ್​​ ಈ ಸೌಕರ್ಯವು ಮೊದಲು ತಮಾಷೆಯ ರೀತಿಯಲ್ಲಿ ನಮ್ಮ ರೆಸ್ಟಾರೆಂಟ್​ನಲ್ಲಿ ಆರಂಭಗೊಂಡಿತ್ತು ಎಂದು ಹೇಳಿದ್ದಾರೆ. ಮನ್ಸಾಫ್​ ತಯಾರಿಸಲು ಮೊಸರು, ತುಪ್ಪ, ಮಾಂಸಗಳನ್ನು ಬಳಕೆ ಮಾಡುತ್ತೇವೆ. ಇದನ್ನು ತಿಂದ ಬಳಿಕ ಹೆಚ್ಚಿನ ಜನರು ನಿದ್ದೆ ಮಾಡಲು ಇಚ್ಛಿಸುತ್ತಿದ್ದರು ಎಂದು ಹೇಳಿದ್ದಾರೆ.

ಹೀಗಾಗಿ ರೆಸ್ಟಾರೆಂಟ್​​ನಲ್ಲಿ ಗ್ರಾಹಕರಿಗೆ ಮಲಗಲು ಪ್ರತ್ಯೇಕ ಪ್ರದೇಶವನ್ನು ಮೀಸಲಿಡಲಾಗಿದ್ದು ಇಲ್ಲಿ ಒಬ್ಬರು ಆರಾಮದಾಯಕವಾಗಿ ನಿದ್ದೆ ಮಾಡಬಹುದಾಗಿದೆ. ಮನ್ಸಾಫ್​​ನ ಜೊತೆಯಲ್ಲಿ ಜೋರ್ಡಾನ್​​ನ ಈ ರೆಸ್ಟಾರೆಂಟ್​​ ಕಾಫಿಯನ್ನು ಸಹ ನೀಡುತ್ತಿದೆ. ಒಂದೊಳ್ಳೆ ಊಟ ಮಾಡಿದ ಬಳಿಕ ಚಿಕ್ಕ ನಿದ್ರೆ ಮಾಡಬೇಕು ಎನಿಸುತ್ತದೆಯೇ..? ಜೋರ್ಡಾನ್​​ನಲ್ಲಿರುವ ಈ ರೆಸ್ಟಾರೆಂಟ್​ ನಿಮಗೆ ಇಲ್ಲಿನ ರಾಷ್ಟ್ರೀಯ ಖಾದ್ಯವನ್ನು ಆನಂದಿಸಲು ಅವಕಾಶ ನೀಡಿದ ಬಳಿಕ ಮಲಗೋಕೂ ವ್ಯವಸ್ಥೆ ಕಲ್ಪಿಸಿ ಕೊಡುತ್ತದೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾದ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 48 ಸಾವಿರಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

https://twitter.com/i/status/1682224628578791425

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read