ಈ ರಾಶಿಯವರು ಇಂದು ಖರೀದಿ ಮಾಡಲಿದ್ದಾರೆ ಹೊಸ ವಾಹನ

ಮೇಷ : ಪೂರ್ವಜರ ಆಸ್ತಿ ಮಾರಲು ಮುಂದಾದ ನಿಮಗೆ ಇಂದು ಉತ್ತಮ ಬೆಲೆ ನೀಡುವ ಗ್ರಾಹಕರು ಸಿಗಲಿದ್ದಾರೆ.

ವ್ಯವಹಾರವನ್ನು ಮುಂದುವರಿಸುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸಲಿದ್ದೀರಿ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ.

ವೃಷಭ : ನೀವು ಎಷ್ಟೇ ಶ್ರಮ ಪಟ್ಟರೂ ಸಹ ಅದಕ್ಕೆ ತಕ್ಕ ಬೆಲೆ ಸಿಗುವುದಿಲ್ಲ. ಇದರಿಂದ ನೀವು ತುಂಬಾನೇ ನಿರಾಶೆಗೆ ಒಳಗಾಗಲಿದ್ದೀರಿ. ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಅಕ್ಕಸಾಲಿಗರಿಗೆ ಇಂದು ಲಾಭವಿದೆ.

ಮಿಥುನ : ಆಮೆ ಹಾಗೂ ಮೊಲದ ಕತೆಯನ್ನು ಚಿಕ್ಕ ವಯಸ್ಸಿನಲ್ಲಿ ಕೇಳಿರಬೇಕಲ್ಲವೇ..? ಹಾಗಾದಲ್ಲಿ ನಿಮ್ಮ ಜೀವನದಲ್ಲಿ ನೀವು ಆಮೆಯಾಗುತ್ತಿದ್ದೀರೋ ಅಥವಾ ಮೊಲವಾಗಿದ್ದೀರೋ ಎಂಬುದನ್ನು ಅವಲೋಕನ ಮಾಡಿಕೊಳ್ಳಿ. ಉದ್ಯಮದಲ್ಲಿ ಲಾಭವಿದೆ.

ಕಟಕ : ಪ್ರೀತಿ ಅಂದರೆ ಹಕ್ಕಲ್ಲ. ಅದೊಂದು ಕರ್ತವ್ಯ. ಹೀಗಾಗಿ ಸಂಗಾತಿಯ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಿ. ಮಕ್ಕಳ ಮನೋಭಾವನೆಗಳನ್ನು ಈಡೇರಿಸಲಿದ್ದೀರಿ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.

ಸಿಂಹ : ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಇಂದು ಲಾಭ ಕಾದಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗ ಬರಲಿದೆ. ಅನೇಕ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವ ನಿಮಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ಕನ್ಯಾ : ಮನೆಯಲ್ಲಿ ಇಂದು ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಶೀಘ್ರದಲ್ಲೇ ನಿಮ್ಮ ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಶತ್ರುಬಾಧೆ ತಪ್ಪಿದ್ದಲ್ಲ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾದಿದೆ. ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು.

ತುಲಾ : ಕಚೇರಿ ಸ್ಥಳ ಬದಲಾವಣೆ ಮಾಡಬೇಕೆಂಬ ಯೋಚನೆಯು ನಿಮ್ಮ ತಲೆಯಲ್ಲಿ ಬಲವಾಗಿ ಬೇರೂರಲಿದೆ. ಹೀಗಾಗಿ ಈ ಸಂಬಂಧ ಇಂದಿನಿಂದ ಪ್ರಯತ್ನ ಆರಂಭಿಸಲಿದ್ದೀರಿ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸ್ನೇಹಿತರಿಗೆ ಹೆಗಲಾಗಲಿದ್ದೀರಿ.

ವೃಶ್ಚಿಕ : ಹೊಸ ಉದ್ಯಮ ಆರಂಭಿಸಿರುವ ನೀವು ಇಂದು ಲಾಭವನ್ನು ಸಂಪಾದನೆ ಮಾಡಲಿದ್ದೀರಿ. ಕುಟುಂಬಸ್ಥರೆಲ್ಲ ಸೇರಿ ಇಂದು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹಿತಶತ್ರುಗಳ ಕಾಟದಿಂದ ಕಚೇರಿಯಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ.

ಧನು : ಹೊಸ ಮನೆಯನ್ನು ನಿರ್ಮಾಣ ಮಾಡುವ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯಲಿದೆ. ನಿಮ್ಮ ಪ್ರೀತಿ ವಿಚಾರವನ್ನು ಪೋಷಕರೊಂದಿಗೆ ಹಂಚಿಕೊಳ್ಳಲಿದ್ದೀರಿ. ಬೆನ್ನು ನೋವಿನ ಸಮಸ್ಯೆಯು ಇಂದು ನಿಮ್ಮನ್ನು ಕಾಡಲಿದೆ.

ಮಕರ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತಿರೋದರಿಂದ ಕುಟುಂಬಸ್ಥರ ಸಮಾಗಮವಾಗಲಿದೆ. ಹೀಗಾಗಿ ಇಂದೇ ಆಸ್ತಿ ಭಾಗದ ಬಗ್ಗೆ ಪೋಷಕರು ಪ್ರಸ್ತಾಪ ಮಾಡಲಿದ್ದಾರೆ. ಸ್ತ್ರೀಯರ ಹೆಗಲಿಗೆ ಹೊಸ ಜವಾಬ್ದಾರಿಗಳು ಏರಲಿದೆ.

ಕುಂಭ : ಸದಾ ಕಿರಿಕಿರಿ ಮಾಡುತ್ತಿದ್ದ ನಿಮ್ಮ ಸಂಗಾತಿ ಇಂದು ಶಾಂತ ರೀತಿಯಲ್ಲಿ ವರ್ತಿಸಲಿದ್ದಾರೆ. ಇದರಿಂದ ನಿಮಗೂ ನಿರಾಳ ಎನಿಸಲಿದೆ. ಮಕ್ಕಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಲಿದ್ದಾರೆ. ಯಾವುದೇ ಹೆಜ್ಜೆ ಇಡುವ ಮುನ್ನ ಹಿರಿಯರ ಸಲಹೆ ಕೇಳುವುದು ಉತ್ತಮ.

ಮೀನ : ಇಂದು ನೀವು ಹೊಸ ವಾಹನವನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ರಾಜಕೀಯ ವ್ಯಕ್ತಿಗಳಿಗೆ ಇದು ಶುಭ ದಿನವಾಗಿದೆ. ಹಿರಿಯರ ಜೊತೆ ಸಂಯಮದಿಂದ ವರ್ತಿಸುವ ನಿಮ್ಮ ಗುಣ ಪ್ರಶಂಸೆಗೆ ಪಾತ್ರವಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read