ಅತಿಯಾದರೆ ವಿಟಮಿನ್ ʼಸಿʼ ಉಲ್ಬಣವಾಗುತ್ತೆ ಈ ಸಮಸ್ಯೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ವಿಟಮಿನ್ ಸಿ ಸೇವನೆ ವಿಪರೀತ ಹೆಚ್ಚಾದರೆ ಅದು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದು ನಿಮಗೆ ನೆನಪಿರಲಿ.

ಎರಡು ಕಿತ್ತಳೆ ಸೇವನೆಯಿಂದ ಸಿಗುವಷ್ಟು ಪ್ರಮಾಣದ ವಿಟಮಿನ್ ಸಿ ನಿತ್ಯ ನಮ್ಮ ದೇಹಕ್ಕೆ ಬೇಕಾಗುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣ ದೇಹದೊಳಗೆ ಸೇರಿಕೊಂಡರೆ ವಾಂತಿ, ಹೊಟ್ಟೆನೋವು, ತಲೆನೋವು ಹಾಗೂ ನಿದ್ರಾಹೀನತೆಯಂಥ ಸಮಸ್ಯೆಗಳು ಕಂಡು ಬಂದಾವು.

 ವೈದ್ಯರ ಸಲಹೆ ಇಲ್ಲದೆ ವಿಟಮಿನ್ ಸಿ ಮಾತ್ರೆಗಳನ್ನು ಸೇವಿಸದಿರಿ. ಇವು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದೇನೋ ನಿಜ. ಅದರೆ ಊಟಕ್ಕೆ ಪರ್ಯಾಯವಾಗಿ ಇದನ್ನು ಸೇವಿಸುವುದು ಒಳ್ಳೆಯದಲ್ಲ. ಊಟ ತಪ್ಪಿಸಿ ಇವುಗಳನ್ನು ಸೇವಿಸುವುದರಿಂದ ನೀವದರ ಪ್ರಯೋಜನ ಪಡೆಯುವುದು ಸಾಧ್ಯವಾಗಲಿಕ್ಕಿಲ್ಲ.

ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸಿದರೆ ನಿಮ್ಮ ಸಮಸ್ಯೆಗಳು ಉಲ್ಬಣಗೊಂಡಾವು. ಹುಳಿತೇಗಿನಂಥ ಲಕ್ಷಣಗಳು, ಎದೆಯುರಿ ಮೊದಲಾದವು ಹೆಚ್ಚಿ, ನಿಮ್ಮ ಅಸ್ವಸ್ಥತೆಗೆ ಕಾರಣವಾದೀತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read