ಕಪ್ಪು ಬಣ್ಣದ ʼಮುಖ್ಯದ್ವಾರʼದಿಂದ ಕಾಡುತ್ತೆ ಈ ಸಮಸ್ಯೆ

ಕೆಲವೊಂದು ಮನೆಯಲ್ಲಿ  ಸದಾ ಗಲಾಟೆ ನಡೆಯುತ್ತಿರುತ್ತದೆ. ಇನ್ನು ಕೆಲ ಮನೆಯಲ್ಲಿ ಸದಸ್ಯರು ಸದಾ ಅನಾರೋಗ್ಯಕ್ಕೊಳಗಾಗಿರುತ್ತಾರೆ. ಇದೆಲ್ಲದಕ್ಕೂ ವಾಸ್ತು ದೋಷ ಕೂಡ ಮುಖ್ಯ ಕಾರಣವಾಗಿರುತ್ತದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ ಕೆಲವೊಂದು ಸಣ್ಣ ಸಣ್ಣ ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡಿದ್ದರೆ ವಾಸ್ತು ದೋಷವನ್ನು ಸುಲಭವಾಗಿ ನಿವಾರಣೆ ಮಾಡಬಹುದು.

ಮನೆಯ ಮುಖ್ಯ ದ್ವಾರದ ಬಾಗಿಲು ಎಂದೂ ಕಪ್ಪು ಬಣ್ಣದಲ್ಲಿರಬಾರದು. ಇದ್ರಿಂದ ಅವಮಾನ, ಮೋಸ, ನಷ್ಟವನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ.

ಮನೆಯ ಮುಖ್ಯದ್ವಾರ ಮನೆಯ ಉಳಿದ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಮನೆಯ ಮುಖ್ಯದ್ವಾರ ಉಳಿದ ಬಾಗಿಲುಗಳಿಗಿಂತ ಚಿಕ್ಕದಾಗಿದ್ದರೆ ಹಣದ ಸಮಸ್ಯೆ ಮನೆಯವರನ್ನು ಕಾಡುತ್ತದೆ.

ಸೂರ್ಯೋದಯದ ವೇಳೆ ಮನೆಯ ಕಿಟಕಿ ಬಾಗಿಲುಗಳನ್ನು ತೆಗೆದಿಡಬೇಕು. ಸೂರ್ಯನ ಕಿರಣ ಮನೆ ಪ್ರವೇಶ ಮಾಡುವುದ್ರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.

ಮನೆ ಬಾಗಿಲಿನ ಹಿಂದೆ ಶಸ್ತ್ರಾಸ್ತ್ರ, ಆಯುಧಗಳನ್ನು ಇಡಬಾರದು. ಕುಟುಂಬದ ಸದಸ್ಯರಲ್ಲಿ ವಿವಾದ ಮನೆ ಮಾಡಲು ಇದು ಕಾರಣವಾಗುತ್ತದೆ.

ಮನೆಯ ಬೆಡ್ ರೂಮಿನಲ್ಲಿ ವಾಶ್ ರೂಂ ಇರಬಾರದು. ಇದು ಪ್ರೀತಿ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಬೆಡ್ ರೂಂ ನಲ್ಲಿ ವಾಶ್ ಬೇಸಿನ್ ಇದ್ದರೆ ಅದಕ್ಕೆ ಪರದೆ ಹಾಕಿ ಮುಚ್ಚಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read