ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ ? ಇಲ್ಲಿದೆ ವಿವರ

ಅಯೋಧ್ಯೆಯ ರಾಮ ಮಂದಿರಕ್ಕೆ ಕೋಟ್ಯಾಂತರ ರೂಪಾಯಿ ದೇಣಿಗೆ ರೂಪದಲ್ಲಿ ಬಂದಿದೆ. ರಾಮನ ಭಕ್ತರು ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ. ಅದ್ರಲ್ಲಿ ಅತಿ ಹೆಚ್ಚು ದಾನ ಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿ ಗುಜರಾತಿನ ರಾಮ ಭಕ್ತ ದಿಲೀಪ್‌ ಕುಮಾರ್‌ ವಿ. ಲಿಖಿ ಮೊದಲ ಸ್ಥಾನದಲ್ಲಿದ್ದಾರೆ. ದಿಲೀಪ್ ಕುಮಾರ್ ವಿ. ಲಖಿ ಅವರು 101 ಕೆ.ಜಿ ಚಿನ್ನವನ್ನು ದಾನ ಮಾಡಿದ್ದಾರೆ.

ಮೂಲತಃ ದಿಲೀಪ್ ಕುಮಾರ್ ವಿ. ಲಖಿ ಸೂರತ್‌ನ ಅತಿ ದೊಡ್ಡ ವಜ್ರದ ಕಾರ್ಖಾನೆ ಹೊಂದಿದ್ದಾರೆ. ಅವರ ಕುಟುಂಬ ಸೂರತ್‌ನ ದೊಡ್ಡ ವಜ್ರದ ವ್ಯಾಪಾರಿಗಳಲ್ಲಿ ಒಂದಾಗಿದೆ. ದಿಲೀಪ್‌ ಕುಮಾರ್‌ ನೀಡಿರುವ ಚಿನ್ನದಲ್ಲಿ ರಾಮ ಮಂದಿರದ ಗರ್ಭಗುಡಿಯ ಬಾಗಿಲು, ತ್ರಿಶೂಲ, ಡಮರು ಮತ್ತು ಕಂಬಗಳಿಗೆ ಪಾಲಿಶ್ ಮಾಡಲಾಗಿದೆ.

ದಿಲೀಪ್ ಕುಮಾರ್ ತಂದೆ ವಿಶಿಂದಾಸ್ ಹೊಳರಾಮ್. ಅವರು ಚಿನ್ನದ ವ್ಯಾಪಾರಿ. ದಿಲೀಪ್‌ ಕುಮಾರ್‌, 13 ನೇ ವಯಸ್ಸಿನಲ್ಲಿಯೇ ಈ ಕ್ಷೇತ್ರಕ್ಕೆ ಧುಮುಕಿದ್ದರು. ಬಿಡುವಿನ ವೇಳೆಯಲ್ಲಿ ಇದ್ರ ಬಗ್ಗೆ ತರಬೇತಿ ಪಡೆಯುತ್ತಿದ್ದರು. 1972 ರಲ್ಲಿ, ದಿಲೀಪ್ ಕುಮಾರ್ ಅವರಿಗೆ 22 ವರ್ಷ ವಯಸ್ಸಾದಾಗ ತಂದೆ ಮಾತಿನಂತೆ ಮುಂಬೈಗೆ ಹೋದ ದಿಲೀಪ್‌ ಕುಮಾರ್‌, ಅಲ್ಲಿ ಆಭರಣ ಮಾರುಕಟ್ಟೆಗಾಗಿ ಕೇಂದ್ರವನ್ನು ಸ್ಥಾಪಿಸಿದ್ದರು. ತಮ್ಮ ತಂದೆ ವಿಶ್ವಾಸ ಉಳಿಸಿಕೊಂಡಿದ್ದ ದಿಲೀಪ್‌, ವ್ಯಾಪಾರದಲ್ಲಿ ಹಿಡಿತ ಸಾಧಿಸಿದ್ದರು. ಈಗ ಸೂರತ್‌ ನಲ್ಲಿರುವ ಅವರ ಕಂಪನಿಯಲ್ಲಿ 6,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಗ್ರಾಹಕರ ಅಗತ್ಯವನ್ನು ಗಮನಿಸಿ ಉತ್ಪನ್ನ ತಯಾರಿಸೋದು ದಿಲೀಪ್‌ ಕುಮಾರ್‌ ಯಶಸ್ಸಿಗೆ ಮುಖ್ಯ ಕಾರಣವಾಗಿದೆ. ಅವರ ಸಹೋದರರು ಕೂಡ ದಿಲೀಪ್‌ ಕುಮಾರ್‌ ಕೆಲಸದಲ್ಲಿ ಕೈಜೋಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read