ಗರ್ಭಾವಸ್ಥೆಯಲ್ಲಿ ಖಿನ್ನತೆಯ ಅಪಾಯ ಹೆಚ್ಚಿಸುತ್ತದೆ ಈ ಒಂದು ಕೆಲಸ; ಮಗುವಿನ ಮೇಲಾಗಬಹುದು ಕೆಟ್ಟ ಪರಿಣಾಮ…..!

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಬಹಳ ವಿಶೇಷ ಮತ್ತು ಸೂಕ್ಷ್ಮವಾದ ಸಮಯ.  ಹಾಗಾಗಿ ಗರ್ಭಿಣಿಯರು ಈ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಅಪಾಯಕಾರಿ. ತಜ್ಞರ ಪ್ರಕಾರ ಗರ್ಭಾವಸ್ಥೆಯಲ್ಲಿ ನಕಾರಾತ್ಮಕ ಚಿಂತನೆ ಮತ್ತು ಒತ್ತಡದಿಂದಾಗಿ ಮಹಿಳೆಯರಲ್ಲಿ ಖಿನ್ನತೆಯ ಅಪಾಯವು ಹೆಚ್ಚಾಗುತ್ತದೆ.  ಇದು ತಾಯಿಯ ಆರೋಗ್ಯದ ಮೇಲೆ ಮಾತ್ರವಲ್ಲದೆ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುತ್ತದೆ.

ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯಿಂದಾಗಿ, ಮಹಿಳೆಯರು ದೈಹಿಕ ಮತ್ತು ಮಾನಸಿಕವಾಗಿ ಅನೇಕ ಏರಿಳಿತಗಳನ್ನು ಎದುರಿಸುತ್ತಾರೆ. ಈ ಬದಲಾವಣೆಗಳಿಂದಾಗಿ ಕೆಲವೊಮ್ಮೆ ಒತ್ತಡ, ಆತಂಕ ಮತ್ತು ನಕಾರಾತ್ಮಕ ಚಿಂತನೆ ಕಾಡುವುದು ಸಹಜ. ಆದರೆ ನಿರಂತರವಾಗಿ ನಕಾರಾತ್ಮಕ ಆಲೋಚನೆಗಳಿಂದ ಸುತ್ತುವರೆದಿದ್ದರೆ  ಅದು ಅವರ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ, ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ.

ನಕಾರಾತ್ಮಕ ಚಿಂತನೆಯಿಂದಾಗಿ ಮಹಿಳೆಯರಲ್ಲಿ ನಿದ್ರೆಯ ಕೊರತೆ, ಹಸಿವಿನ ಬದಲಾವಣೆ ಮತ್ತು ಆತ್ಮವಿಶ್ವಾಸದ ಕೊರತೆಯಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಗರ್ಭಾವಸ್ಥೆಯಲ್ಲಿ ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರು ಪ್ರತ್ಯೇಕತೆಯನ್ನು ಅನುಭವಿಸುತ್ತಾರೆ. ಇದು ಮಗುವಿನ ಆರೋಗ್ಯಕ್ಕೆ ಸಹ ಹಾನಿಕಾರಕ.

ತಾಯಿಯ ಮಾನಸಿಕ ಆರೋಗ್ಯವು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಂಶೋಧಕರ ಪ್ರಕಾರ ಗರ್ಭಾವಸ್ಥೆಯಲ್ಲಿ ತಾಯಿ ಖಿನ್ನತೆಯಿಂದ ಬಳಲುತ್ತಿದ್ದರೆ ಜನನದ ನಂತರ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ವಿಳಂಬವಾಗಬಹುದು. ಇದಲ್ಲದೆ ಗರ್ಭಾವಸ್ಥೆಯಲ್ಲಿ ಒತ್ತಡ ಮತ್ತು ಆತಂಕದ ಕಾರಣದಿಂದಾಗಿ ಅಕಾಲಿಕ ಹೆರಿಗೆ ಮತ್ತು ಮಗುವಿನ ತೂಕ ಕಡಿಮೆ ಇರುವ ಸಾಧ್ಯತೆ ಇರುತ್ತದೆ.

ಈ ಸಮಸ್ಯೆಗಳಿಂದ ಪಾರಾಗಲು ಗರ್ಭಿಣಿಯರು ಧನಾತ್ಮಕವಾಗಿ ಯೋಚಿಸುವುದು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಒತ್ತಡದಿಂದ ಪಾರಾಗಲು ಧ್ಯಾನ, ಯೋಗ ಮತ್ತು ವಿಶ್ರಾಂತಿಯನ್ನು ಮಾಡಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗರ್ಭಿಣಿ ನಿರಂತರವಾಗಿ ದುಃಖ, ಆತಂಕ ಅಥವಾ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ತಕ್ಷಣ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read