ಕೂದಲಿನ ಎಲ್ಲಾ ಸಮಸ್ಯೆಗೂ ಪರಿಹಾರ ಈ ಎಣ್ಣೆ ಬೆರೆಸಿದ ಮೆಹಂದಿ

ಸಾಮಾನ್ಯವಾಗಿ ಎಲ್ಲರೂ ತಲೆ ಕೂದಲಿಗೆ ಮೆಹಂದಿ ಹಚ್ಚುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಈ ಗೋರಂಟಿಯಿಂದ ಕೂದಲು ನೈಸರ್ಗಿಕವಾಗಿ ಹೊಳಪು ಮತ್ತು ದೃಢತೆಯನ್ನು ಪಡೆದುಕೊಳ್ಳುತ್ತದೆ. ಕೆಲವರು ಮೆಹಂದಿ ಜೊತೆಗೆ ಕಾಫಿ ಪುಡಿ ಅಥವಾ ಮೊಟ್ಟೆಯನ್ನು ಬೆರೆಸಿ ಕೂದಲಿಗೆ ಹಚ್ಚಿಕೊಳ್ತಾರೆ.

ಮೆಹಂದಿಗೆ ಬಾದಾಮಿ ಎಣ್ಣೆಯನ್ನು ಕೂಡ ಬೆರೆಸಬಹುದು. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಅಷ್ಟೇ ಅಲ್ಲ ತಲೆಹೊಟ್ಟು ಹೋಗಲಾಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ.

ಬಾದಾಮಿ ಎಣ್ಣೆಯನ್ನು ಗೋರಂಟಿ ಜೊತೆಗೆ ಮಿಕ್ಸ್‌ ಮಾಡಿ ಹಚ್ಚುವುದರಿಂದ ಕೂದಲಿಗೆ ಸಾಕಷ್ಟು ಪೋಷಣೆ ಸಿಗುತ್ತದೆ. ವಿಟಮಿನ್ ಇ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಸಮೃದ್ಧವಾಗಿರುವ ಬಾದಾಮಿ ಎಣ್ಣೆಯು ಕೂದಲಿಗೆ ತುಂಬಾ ಒಳ್ಳೆಯದು.

ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಅವರು ಮೆಹಂದಿ ಮತ್ತು ಬಾದಾಮಿ ಎಣ್ಣೆಯ ಪೇಸ್ಟ್‌ ಅನ್ನು ತಲೆಗೆ ಹಚ್ಚಿಕೊಳ್ಳಬೇಕು. ಇದರಿಂದ ಕೂದಲು ಕಪ್ಪಾಗುತ್ತದೆ. ಕೂದಲು ದುರ್ಬಲವಾಗಿದ್ದರೆ ಹೆಚ್ಹೆಚ್ಚು ಉದುರುತ್ತದೆ. ಬಾದಾಮಿ ಎಣ್ಣೆ ಮತ್ತು ಮೆಹಂದಿಯನ್ನು ನಿಯಮಿತವಾಗಿ ಬಳಸುತ್ತ ಬಂದರೆ ನಿಮ್ಮ ಕೂದಲು ಸದೃಢವಾಗುತ್ತದೆ. ನಿಮ್ಮ ಕೂದಲಿನ ಬೆಳವಣಿಗೆಯನ್ನು ಇದು ಬಲಪಡಿಸುತ್ತದೆ.

ಪರಿಸರ ಮಾಲಿನ್ಯದಿಂದ ತಲೆಹೊಟ್ಟಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಬಹುತೇಕ ಎಲ್ಲರಿಗೂ ತಲೆಹೊಟ್ಟು ಇದ್ದೇ ಇರುತ್ತದೆ. ಮೆಹಂದಿ ಮತ್ತು ಬಾದಾಮಿ ಎಣ್ಣೆಯ ಹೇರ್‌ ಮಾಸ್ಕ್‌ ಬಳಸುವುದರಿಂದ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read