ಸುಂದರವಾಗಿ ಕಾಣಲು ಇದೊಂದು ತೈಲ ಇದ್ದರೆ ಸಾಕು…!

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಇದಕ್ಕಾಗಿ ಹತ್ತಾರು ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸ್ತೀವಿ. ಇಲ್ಲವಾದ್ರೆ ಮೇಕಪ್‌ ಕೂಡ ಟ್ರೈ ಮಾಡೋದು ಸಹಜ. ಆದ್ರೆ ನೈಸರ್ಗಿಕವಾದ ಸೌಂದರ್ಯವನ್ನು ಪಡೆಯಲು ಕೇವಲ ಒಂದೇ ಒಂದು ಉತ್ಪನ್ನವಿದ್ರೆ ಸಾಕು.

ಬದಲಾದ ಜೀವನ ಶೈಲಿಯಿಂದ ವಯಸ್ಸಿಗೂ ಮೊದಲೇ ಮುಖವನ್ನು ಆವರಿಸುವ ಸುಕ್ಕು, ಮೊಡವೆ, ಕಲೆಗಳು ಎಲ್ಲದಕ್ಕೂ ಮದ್ದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆ ನಿಮ್ಮ ಮುಖದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ನೀಡಬಲ್ಲದು. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ವಿಟಮಿನ್-ಇ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ.

ಈ ತೈಲವು ಸೀರಮ್‌ನಂತೆ  ಕಾರ್ಯನಿರ್ವಹಿಸುತ್ತದೆ. ಆದ್ರೆ ತೆಂಗಿನೆಣ್ಣೆ ಅತಿಯಾಗಿ ಬಳಸಬಾರದು ಅಂತಾನೂ ಹೇಳಲಾಗುತ್ತದೆ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ತೆಂಗಿನ ಎಣ್ಣೆಯನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮುಖದ ಕಾಂತಿ ಹೆಚ್ಚಾಗುತ್ತದೆ. ರಾತ್ರಿ ಮಲಗುವ ಮುನ್ನ ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದು ಉತ್ತಮ. ನಿಮ್ಮ ಮುಖದ ಮೇಲೆ ಸುಕ್ಕುಗಳ ಸಮಸ್ಯೆ ಇದ್ದರೆ ನೀವು ತೆಂಗಿನ ಎಣ್ಣೆಯನ್ನು ಹಚ್ಚಬೇಕು.

ನಿಮ್ಮ ಚರ್ಮಕ್ಕೆ ವಯಸ್ಸಾಗದಂತೆ ಇದು ತಡೆಯಬಲ್ಲದು. ಹವಾಮಾನ ಬದಲಾವಣೆಯಿಂದಾಗಿ ಒಮ್ಮೊಮ್ಮೆ ಮುಖವೂ ಶುಷ್ಕವಾಗುತ್ತದೆ, ಚರ್ಮ ಒಣಗಿ ಹೋಗುತ್ತದೆ. ನಿಮ್ಮ ಮುಖದ ಶುಷ್ಕತೆಯನ್ನು ಹೋಗಲಾಡಿಸಲು ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ರೆ ನಿಮ್ಮ ಮುಖದಲ್ಲಿ ತೇವಾಂಶ ಉಳಿಯುತ್ತದೆ.

ಮಾಲಿನ್ಯ ಮತ್ತು ಕಲುಷಿತ ಆಹಾರದಿಂದಾಗಿ ಮುಖದ ಮೇಲೆ ಮೊಡವೆ ಮತ್ತು ವಿವಿಧ ರೀತಿಯ ಕಲೆಗಳು ಕಂಡುಬರುತ್ತವೆ. ಇದನ್ನು ಹೋಗಲಾಡಿಸಲು ನೀವು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಅಂಗೈಗೆ ತೆಂಗಿನೆಣ್ಣೆಯ ನಾಲ್ಕು ಹನಿಗಳನ್ನು ಹಾಕಿಕೊಂಡು ಮುಖಕ್ಕೆ ಮಸಾಜ್ ಮಾಡಿ. ಸುಮಾರು 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿದರೆ  ಕಲೆಗಳು ಹೋಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read