ಚರ್ಮ ಫಳಫಳ ಹೊಳೆಯಲು ಕೋಗಿಲೆ ಮಲ; ಜಪಾನ್‌ ಬ್ಯೂಟಿ ಪಾರ್ಲರ್‌ ನಿಂದ ಬಳಕೆ

ಸುಂದರವಾಗಿ ಕಾಣಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದಾಗಿ ರಾಸಾಯನಿಕಗಳ ಮೊರೆ ಹೋಗುವುದು ಉಂಟು. ಹೊಳೆಯುವ ಚರ್ಮವನ್ನು ಪಡೆಯಲು, ಸುಕ್ಕುಗಟ್ಟಿದ ಮುಖವನ್ನು ಸುಂದರಗೊಳಿಸಲು ಸಹಸ್ರಾರು ರೂ. ಖರ್ಚು ಮಾಡುವವರು ಹೇರಳವಾಗಿ ಸಿಗುತ್ತಾರೆ.

ಆದರೆ ನೈಸರ್ಗಿಕವಾಗಿ ಸುಂದರವಾಗಿ ಮಾಡುತ್ತಿದೆ ಜಪಾನ್​ನ ಬ್ಯೂಟಿ ಪಾರ್ಲರ್​. ಅದು ಹೇಗೆ ಅಂತೀರಾ? ಇದನ್ನು ಬರ್ಡ್ ಪೂಪ್ ಫೇಶಿಯಲ್ ಎಂದು ಕರೆಯಲಾಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ.

ಇದು ಜಪಾನಿನ ಕ್ಯುಶು ದ್ವೀಪದಲ್ಲಿ ಮಾತ್ರ ಕಂಡುಬರುವ ಫೇಷಿಯಲ್​ ಆಗಿದೆ. ಇದರ ಅರ್ಥ ಕೋಗಿಲೆಯ ಮಲದಿಂದ ಫೇಷಿಯಲ್​ ಮಾಡಲಾಗುತ್ತದೆ. ಇದನ್ನು ಸೆಲೆಬ್ರಿಟಿಗಳು ಸೇರಿದಂತೆ ಶ್ರೀಮಂತರು ಮಾಡಿಸಿಕೊಳ್ಳುತ್ತಾರೆ. ಪ್ರತಿ ಸಿಟ್ಟಿಂಗ್‌ಗೆ ಕನಿಷ್ಠ 14 ಸಾವಿರ ರೂಪಾಯಿಗಳು ಇವೆ. ಆದರೆ ಇದರಿಂದ ಮುಖ ಸುಂದರವಾಗಿ, ಫಳಫಳ ಹೊಳೆಯುವುದಂತೂ ಖಂಡಿತ ಎನ್ನಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read