ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ವಿನೀತ್ ದುಬೆ ಎಂಬ ವ್ಯಕ್ತಿ ಕೂದಲು ಕಸಿ ಚಿಕಿತ್ಸೆಯ ನಂತರ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಾನ್ಪುರದ ಪಂಕಿ ವಿದ್ಯುತ್ ಸ್ಥಾವರದಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದುಬೆ ಅವರು ಮಾರ್ಚ್ 14 ರಂದು, ಚಿಕಿತ್ಸೆ ಪಡೆದ ಒಂದು ದಿನದ ನಂತರ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಸಿ ಶಸ್ತ್ರಚಿಕಿತ್ಸೆ ವಿಫಲವಾದ ತಕ್ಷಣ ಅವರ ಮುಖ ಊದಿಕೊಂಡಿತು ಮತ್ತು ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಅವರ ಸ್ಥಿತಿ ಹದಗೆಟ್ಟ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮಾರ್ಚ್ 14 ರಂದು ಅವರು ಕೊನೆಯುಸಿರೆಳೆದರು. ದುಬೆ ಅವರ ಆಕಸ್ಮಿಕ ಮರಣದ ನಂತರ ವೈದ್ಯರು ಹೇರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಅನ್ನು ದಿಢೀರ್ ಮುಚ್ಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಅವರ ಪತ್ನಿ ಕ್ಲಿನಿಕ್ ಮತ್ತು ಅದರ ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ.
कानपुर में विनीत दुबे ने 13 मार्च को हेयर ट्रांसप्लांट कराया, जिसके बाद उनका चेहरा सूज गया और तबीयत बिगड़ती चली गई. हालत गंभीर होने पर उन्हें आनन फानन में अस्पताल में भर्ती कराया गया, जहां 14 मार्च को विनीत की मौत हो गई.
— Priya singh (@priyarajputlive) May 13, 2025
विनीत की मौत के बाद हेयर ट्रांसप्लांट करने वाले क्लिनिक… pic.twitter.com/b7d5HboXah