ಜಿಪ್ಸಿಯಷ್ಟೇ ಕ್ರೇಜ಼್ ಸೃಷ್ಟಿಸುತ್ತಿದೆ ಜಿಮ್ನಿ; ಮೇ ನಲ್ಲಿ ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜ಼ುಕಿ

ಅನೇಕ ಆಕರ್ಷಕ ಫೀಚರ್‌ಗಳೊಂದಿಗೆ ಭಾರತೀಯ ರಸ್ತೆಗಳಿಗೆ ಇಳಿಯಲು ಸಜ್ಜಾಗುತ್ತಿರುವ ಮಾರುತಿ ಜಿಮ್ನಿ ಕಾರು ತಾನು ಸಂಚರಿಸುವ ರಸ್ತೆಗಳಲ್ಲೆಲ್ಲಾ ಜನರ ವಿಶೇಷ ಗಮನ ಸೆಳೆಯುತ್ತಿದೆ.

ಸುದೀರ್ಘಾವಧಿಯ ಕಾಯುವಿಕೆ ನಂತರ ಕೊನೆಗೂ ತನ್ನ ಜಿಮ್ನಿ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಮಾರುತಿ ಸುಜ಼ುಕಿ. ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಆಫ್‌ರೋಡರ್‌ ಸಾಹಸಿಗಳ ಬೇಡಿಕೆಗನುಗುಣವಾಗಿ ಅನೇಕ ಫೀಚರ್‌ಗಳನ್ನು ಹೊಂದಿರುವ ಜಿಮ್ನಿ ಎಸ್‌ಯುವಿ ಮಡ್ರಾನ್‌ನಲ್ಲಿ ವಿಶೇಷವಾದ ಅಡ್ವೆಂಚರ್‌ ಡಿಫೆಂಡರ್‌ ಕಿಟ್ ಹೊಂದಿದೆ. ಮುಂಭಾಗದಲ್ಲಿ, ಆಕರ್ಷಕ ಗ್ರಿಲ್ ಹಾಗೂ ಬಂಪರ್‌ಗಳಿದ್ದು, ಲ್ಯಾಂಡ್‌ ರೋವರ್‌ ಡಿಫೆಂಡರ್‌ ನೆನಪಾಗುತ್ತದೆ. ಕಾರಿನ ಹುಡ್‌ ಬ್ರಾಬುಸ್ 800ನಿಂದ ಪ್ರೇರಣೆ ಪಡೆದು ಮಾಡಿದಂತಿದೆ.

15 ಇಂಚಿನ ಕ್ರಿಮ್ಸನ್‌ ಡೀನ್ ಕೊಲರಾಡೋ ಚಕ್ರಗಳ ನೆರವಿನಿಂದ ಆಫ್‌ರೋಡ್ ಸಾಹಸಕ್ಕೆ ಹೇಳಿ ಮಾಡಿಸಿದಂತಿದೆ ಜಿಮ್ನಿ.

ಆಟೋ ಎಕ್ಸ್‌ಪೋ 2023ರಲ್ಲಿ 5 ಬಾಗಿಲಿನ ಎಸ್‌ಯುವಿಯಾಗಿ ಭಾರತದಲ್ಲಿ ಪಾದಾರ್ಪಣೆ ಮಾಡುತ್ತಿರುವ ಜಿಮ್ನಿ ಏಣಿ ಫ್ರೇಂ ಚಾಸಿಸ್‌ ಹಾಗೂ ಸುಜ಼ುಕಿ ಟೆಕ್ ಪ್ಲಾಟ್‌ಫಾರಂಗಳ ಮೇಲೆ ಅಭಿವೃದ್ಧಿಯಾಗಿದೆ.

ಐಡಲ್ ಸ್ಟಾರ್ಟ್/ಸ್ಟಾಪ್ ಫೀಚರ್‌ನೊಂದಿಗೆ 1.5 ಲೀ ಕೆ-ಸೀರೀಸ್ ಪೆಟ್ರೋಲ್ ಇಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್, 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳ ಆಯ್ಕೆಯನ್ನು ಹೊಸ ಜಿಮ್ನಿ ಹೊಂದಿದೆ. ಸುಜ಼ುಕಿಯ ವಿಶೇಷ 4×4 ಆಲ್‌ಗ್ರಿಪ್ ಚಾಲನಾ ವ್ಯವಸ್ಥೆ ಸಹ ಈ ವಾಹನದಲ್ಲಿದೆ.

ಮಾರುತಿ ಸುಜ಼ುಕಿಯ ನೆಕ್ಸಾ ಶೋರೂಂಗೆ ಈ ಕಾರುಗಳು ಆಗಮಿಸಲು ಆರಂಭಿಸಿದ್ದು, ಬುಕಿಂಗ್‌ ಗವಾಕ್ಷಿಯನ್ನು ತೆರೆಯಲಾಗಿದೆ. ಏಪ್ರಿಲ್ 2023ರಲ್ಲಿ ಜಿಮ್ನಿಯ ಉತ್ಪಾದನೆ ಆರಂಭಿಸಲಿರುವ ಇಂಡೋ-ಜಪಾನೀಸ್ ಆಟೋ ದಿಗ್ಗಜ, ಮೇ 2023ರ ಹೊತ್ತಿಗೆ ಎಸ್‌ಯುವಿಯ ಬೆಲೆ ಘೋಷಿಸುವ ಸಾಧ್ಯತೆ ಇದೆ.

ಭಾರತೀಯ ಹಾಗೂ ಜಾಗತಿಕ ಮಾರುಕಟ್ಟೆಗಳೆರಡಕ್ಕೂ ಮಾರುತಿ ಸುಜ಼ುಕಿಯ ಗುರುಗ್ರಾಮದ ಉತ್ಪಾದನಾ ಘಟಕದಲ್ಲಿ ಜಿಮ್ನಿ ಎಸ್‌ಯುವಿಗಳು ಉತ್ಪಾದನೆಯಾಗಲಿವೆ. ಈ ವರ್ಷದಲ್ಲಿ ಒಂದು ಲಕ್ಷದಷ್ಟು ಎಸ್‌ಯುವಿಗಳನ್ನು ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read