ಪುರುಷರಲ್ಲಿನ ಹೃದಯ ಸಮಸ್ಯೆಗೆ ಇದೂ ಇರಬಹುದು ಮುನ್ಸೂಚನೆ

ಬೇಗನೆ ತಲೆ ಬೋಳಾಗುವುದು, ಕೂದಲು ಬೆಳ್ಳಗಾಗುವುದು ಇವೆಲ್ಲ ಪುರುಷರಲ್ಲಿ ಹೃದಯದ ಸಮಸ್ಯೆಯ ಲಕ್ಷಣಗಳು. 40 ವರ್ಷದೊಳಗೆ ಈ ರೀತಿ ಸಮಸ್ಯೆಯ ಜೊತೆಗೆ ಬೊಜ್ಜು ಕೂಡ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಬೊಜ್ಜಿನಿಂದಾಗಿ ಪುರುಷರಲ್ಲಿ ನಾಲ್ಕು ಬಗೆಯ ಹೃದಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಅದರಲ್ಲೂ ಯುವಕರಲ್ಲಿ ಕೊರೊನರಿ ಆರ್ಟರಿ ಡಿಸೀಸ್ ಹೆಚ್ಚುತ್ತಲೇ ಇದೆ. ಅಕಾಲಿಕವಾಗಿ ಕೂದಲು ಉದುರುವುದು ಮತ್ತು ಬೂದು ಬಣ್ಣಕ್ಕೆ ತಿರುಗುವುದು ಕೂಡ ಈ ಖಾಯಿಲೆಯ ಲಕ್ಷಣಗಳಲ್ಲೊಂದು. ಭಾರತದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆನೇಕ ಯುವಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ತಲೆ ಬೋಳಾಗುವುದು ಹಾಗೂ ಕೂದಲು ಬೆಳ್ಳಗಾಗುವುದಕ್ಕೆ ಸೂಕ್ತ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆನುವಂಶಿಕತೆ ಕೂಡ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read