ಡೇಟಿಂಗ್​ ಆಪ್​ನಲ್ಲಿ ಉದ್ಯೋಗ ಕಂಡುಕೊಂಡ ಯುವಕ: ಪೋಸ್ಟ್​ ವೈರಲ್​

ಒಳ್ಳೆಯ ಸ್ನೇಹಿತರನ್ನು ಹುಡುಕುವ ಸಲುವಾಗಿ ಕೆಲವರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಅದಕ್ಕಾಗಿಯೇ ಇಂದು ಹಲವಾರು ರೀತಿಯ ಡೇಟಿಂಗ್​ ಆ್ಯಪ್​ಗಳು ಲಭ್ಯವಿದೆ. ಕೆಲ ಯುವಕ-ಯುವತಿಯರು ಈ ಆ್ಯಪ್​ ಬಳಸುವುದು ತಮ್ಮ ಜೊತೆ ಓಡಾಟ ಮಾಡಲು ಯಾರಾದರೂ ಸಿಗುತ್ತಾರೋ ಎನ್ನುವ ಕಾರಣಕ್ಕೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆದರೆ ಡೇಟಿಂಗ್​ ಆ್ಯಪ್​ನಲ್ಲಿ ಉದ್ಯೋಗವೂ ಸಿಗುತ್ತದೆ ಎಂದರೆ ನಂಬುತ್ತೀರಾ? ಅಂಥದ್ದೇ ಒಂದು ಘಟನೆ ಈಗ ವೈರಲ್​ ಆಗಿದೆ.

ಅದ್ನಾನ್ ಖಾನ್ ಎಂಬ ಯುವಕ ಈ ಕುತೂಹಲದ ಘಟನೆಯನ್ನು ಶೇರ್​ ಮಾಡಿಕೊಂಡಿದ್ದಾನೆ. ಡೇಟಿಂಗ್​ ಆ್ಯಪ್​ಬಂಬಲ್‌ನಲ್ಲಿ ಡೇಟಿಂಗ್​ ಮಾಡಲು ಹುಡುಕುತ್ತಿದ್ದರೆ, ಇವರಿಗೆ ಸಿಕ್ಕಿದ್ದು ಒಳ್ಳೆಯ ಉದ್ಯೋಗ. ಅದರ ಸ್ಕ್ರೀನ್‌ಶಾಟ್ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾನೆ. ಅದ್ನಾನ್ ಸ್ಟಾರ್ಟಪ್‌ನ ಪ್ರತಿಭಾ ಸಂಪಾದನೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಾನವ ಸಂಪನ್ಮೂಲ ಉದ್ಯೋಗಿಯೊಂದಿಗೆ ಸಂಭಾಷಣೆ ಪ್ರಾರಂಭಿಸಿದ್ದಾರೆ.

ನಂತರ ಆ ಚಾಟ್​ ಮುಂದುವರೆದ ನಂತರ ಅದ್ನಾನ್ ತಾನು ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ತನ್ನ ಈ ಅರ್ಹತೆಗೆ ಸ್ಟಾರ್ಟ್‌ಅಪ್‌ ಮಾಡಬಹುದೇ ಎಂದು ಕೇಳಿದ್ದಾನೆ. ಹೀಗೆ ಅತ್ತ ಕಡೆಯಿಂದ ಡೇಟಿಂಗ್​ ಆ್ಯಪ್​ನಲ್ಲಿದ್ದಾಕೆ ಇದಕ್ಕೆ ತಾನು ಸಹಾಯ ಮಾಡಬಹುದು ಎಂದು ಹೇಳುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ.

ಇದನ್ನು ಶೇರ್​ ಮಾಡಿಕೊಂಡಿರುವ ಯುವಕ, “ನೀವು ಉದ್ಯೋಗಗಳಿಗಾಗಿ ಲಿಂಕ್ಡ್‌ಇನ್ ಅನ್ನು ಬಳಸುತ್ತೀರಿ. ನಾನು ಬಂಬಲ್ ಅನ್ನು ಬಳಸುತ್ತೇನೆ. ನಾವೆಲ್ಲರೂ ಒಂದೇ ಅಲ್ಲ ಬ್ರೋ” ಎಂದು ಬರೆದುಕೊಂಡಿದ್ದು, ಇದಕ್ಕೆ ಹಲವಾರು ಕಮೆಂಟ್ಸ್​ ಬರುತ್ತಿವೆ.

https://twitter.com/theadnaankhan/status/1617007091637518339?ref_src=twsrc%5Etfw%7Ctwcamp%5Etweetembed%7Ctwterm%5E1617007091637518339%7Ctwgr%5Eb1fbe3ea2d6d5c17c67b4800c570aff90168209d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-man-actually-found-a-job-while-using-a-dating-app-his-funny-post-is-viral-2325781-2023-01-24

https://twitter.com/theadnaankhan/status/1617017549400465409?ref_src=twsrc%5Etfw%7Ctwcamp%5Etweetembed%7Ctwterm%5E1617017549400465409%7Ctwgr%5Eb1fbe3ea2d6d5c17c67b4800c570aff90168209d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-man-actually-found-a-job-while-using-a-dating-app-his-funny-post-is-viral-2325781-2023-01-24

https://twitter.com/pingrishabh/status/1617243759074328578?ref_src=twsrc%5Etfw%7Ctwcamp%5Etweetembed%7Ctwterm%5E1617243759074328578%7Ctwgr%5Eb1fbe3ea2d6d5c17c67b4800c570aff90168209d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-man-actually-found-a-job-while-using-a-dating-app-his-funny-post-is-viral-2325781-2023-01-24

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read