ಜಪಾನಿಯರ ಈ ಸಿಕ್ರೇಟ್ ʼಫೇಸ್​ಪ್ಯಾಕ್ʼ ತಡೆಯುತ್ತೆ ಅಕಾಲಿಕ ಮುಪ್ಪು……..!

ವಯಸ್ಸಾಗುತ್ತಿದ್ದಂತೆ ಚರ್ಮದ ಕಾಂತಿ ಕುಂದುವುದು ಸಹಜ. ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ತ್ವಚೆ ತನ್ನ ಬಿಗಿಯನ್ನು ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ 30 ರ ನಂತರ ತ್ವಚೆಗೆ ಕೆಲವೊಂದು ಆರೈಕೆಗಳು ಅತ್ಯಗತ್ಯವಾಗಿ ಬೇಕೇ ಬೇಕು. ಇಲ್ಲವಾದರೆ ವಯಸ್ಸಿಗೆ ತಕ್ಕ ಹಾಗೇ ಕಾಣದೆ ಅಕಾಲಿಕ ಮುಪ್ಪು ಆವರಿಸುತ್ತದೆ. ಆದ್ದರಿಂದ ಜಪಾನಿಯರ ಈ ಸಿಕ್ರೇಟ್ ಫೇಸ್​ಪ್ಯಾಕ್​ ನೀವು ಪ್ರಯತ್ನಿಸಬಹುದು.

ಹೌದು, ಜಪಾನಿಯರು ಬಳಸುವ ಅಕ್ಕಿ ಹಿಟ್ಟಿನ ಫೇಸ್​ಮಾಸ್ಕ್​ ನಿಮಗೆ 10 ವರ್ಷ ಹಿಂದಿನ ಮೃದು ತ್ವಚೆಯನ್ನು ನೀಡುತ್ತದೆ. 2 ಟೀ ಸ್ಪೂನ್​ ಅಕ್ಕಿ ಹಿಟ್ಟು, ಅರ್ಧ ಚಮಚ ಉತ್ತಮ ಗುಣಮಟ್ಟದ ಅರಿಶಿನ ಮತ್ತು 2 ಚಮಚ ಹಸಿ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಪೇಸ್ಟ್​ ಮಾಡಿಕೊಳ್ಳಬೇಕು.

ಈ ಪೇಸ್ಟ್​ ಅನ್ನು ಮುಖಕ್ಕೆ ಫೇಸ್​ಪ್ಯಾಕ್​ನಂತೆ ಹಚ್ಚಿಕೊಂಡು 10 ನಿಮಿಷಗಳ ಬಳಿಕ ಮುಖ ತೊಳೆಯಬೇಕು. ಆ ನಂತರ ಮಾಯಿಸ್ಚರೈಸರ್​ ಹಚ್ಚಬೇಕು. ಕೇವಲ 2 ದಿನಗಳಲ್ಲಿ ಮುಖ ಕಾಂತಿಯನ್ನು ಪಡೆಯುವುದಲ್ಲದೇ ಬಹು ಬೇಗ ಮುಪ್ಪು ಆವರಿಸುವುದಿಲ್ಲ. ಈ ಫೇಸ್​ಪ್ಯಾಕ್​ ತ್ವಚೆಯನ್ನು ಬಿಗಿಯಾಗಿಡುತ್ತದೆ. ಫೈನ್​ ಲೈನ್ಸ್​ ಮತ್ತು ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಅಲ್ಲದೇ ಗ್ಲಾಸಿ ಲುಕ್ ಕೂಡ ನೀಡುತ್ತದೆ.

ಅಕ್ಕಿ ಹಿಟ್ಟು, ತ್ವಚೆಗೆ ವಯಸ್ಸಾಗುವುದನ್ನು ತಡೆಯುತ್ತದೆ ಅಲ್ಲದೇ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನೂ ಅರಿಶಿನ ವಯಸ್ಸಾಗುವ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಕಪ್ಪು ಕಲೆ, ಮೊಡವೆ ಕಲೆ ತೆಗೆದು ಮುಖದ ಗ್ಲೋ ಹೆಚ್ಚಿಸುತ್ತದೆ. ಹಸಿ ಹಾಲು ತ್ವಚೆಗೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಮಾಯಿಸ್ಚರೈಸ್ ಮಾಡುವ ಮೂಲಕ ಏಜಿಂಗ್​ ಪ್ರೊಸಸ್ ನಿಧಾನ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read