ಇದು ವಿಶ್ವದ ಅತಿ ದೊಡ್ಡ ಪೆಟ್ರೋಲ್ ಪಂಪ್ ; ಏಕಕಾಲದಲ್ಲಿ 120 ಕಾರುಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯ !

ದೂರ ಪ್ರಯಾಣಕ್ಕೆ ಮುಂಚೆ ಪೆಟ್ರೋಲ್ ಹಾಕಿಸೋದು ಕಾಮನ್. ನಮ್ಮೂರಲ್ಲಿ 8-10 ಪಂಪ್ ಇದ್ರೆ ಅದೇ ದೊಡ್ಡದು ಅನ್ಕೋತೀವಿ. ಆದ್ರೆ, ಇವತ್ತು ನಾವು ನಿಮಗೆ ಪರಿಚಯಿಸೋಕೆ ಹೊರಟಿರೋದು ವಿಶ್ವದ ಅತಿದೊಡ್ಡ ಪೆಟ್ರೋಲ್ ಬಂಕ್ ! ಅಮೆರಿಕಾದ ಟೆಕ್ಸಾಸ್‌ನಲ್ಲಿರೋ ಈ ಬಂಕ್ ಬರೀ ಪೆಟ್ರೋಲ್ ಹಾಕೋ ಜಾಗ ಅಲ್ಲ, ಪುಟ್ಟ ಮಾಲ್ ಥರಾನೇ ಇದೆ ಅಂದ್ರೆ ನಂಬ್ತೀರಾ ? ಇಲ್ಲಿಗೆ ಹೋದ್ರೆ ಒಂದು ಟ್ರಿಪ್ ಹೋದಂಗಿರುತ್ತೆ !

ಟೆಕ್ಸಾಸ್‌ನ ಲುಲಿಂಗ್ ಅನ್ನೋ ಊರಲ್ಲಿ, ಆಸ್ಟಿನ್‌ನಿಂದ ಸುಮಾರು 47 ಮೈಲಿ ದೂರದಲ್ಲಿರೋ ಈ ಪೆಟ್ರೋಲ್ ಬಂಕ್ ‘ಬುಕ್-ಈ’ಸ್‌’ ಅನ್ನೋ ಕಂಪನಿಗೆ ಸೇರಿದ್ದು. ಬರೋಬ್ಬರಿ 120 ಪೆಟ್ರೋಲ್ ಪಂಪ್‌ಗಳನ್ನ ಹೊಂದಿರೋ ಈ ಬಂಕ್ 75,000 ಚದರ ಅಡಿಗಿಂತಾನೂ ದೊಡ್ಡದಾಗಿದೆ!

ಇತ್ತೀಚೆಗೆ ಟಾಡ್ ಅನ್ನೋ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈ ಬಂಕ್‌ಗೆ ಭೇಟಿ ಕೊಟ್ಟಾಗ ಅಲ್ಲಿನ ವೈಭವ ನೋಡಿ ಬೆಚ್ಚಿಬಿದ್ದಿದ್ರು. ತಮ್ಮ ಅನುಭವ ಶೇರ್ ಮಾಡ್ಕೊಂಡ್ ಅವರು, “ಇಲ್ಲಿ ಒಂದೇ ಲೈನ್‌ನಲ್ಲಿ 120 ಪೆಟ್ರೋಲ್ ಪಂಪ್‌ಗಳಿವೆ. ಇದರ ಒಳಗಡೆ ಸಿಹಿ ತಿಂಡಿಗಳು, ಬೇಕರಿ ಐಟಂಗಳು, ಬೇರೆ ಬೇರೆ ಸಾಮಾನುಗಳು ಮತ್ತೆ ಕ್ಲೀನ್ ಆಗಿರೋ ಟಾಯ್ಲೆಟ್‌ಗಳಿರೋ ದೊಡ್ಡ ಅಂಗಡಿ ಇದೆ” ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಮಾಂಸದ ಕೌಂಟರ್ ಕೂಡ ಇದ್ದು, ಜೊತೆಗೆ ಅಲ್ಲಿ ಫ್ರೆಶ್ ಬ್ರಿಸ್ಕೆಟ್ ಮಾಡ್ತಾರಂತೆ !

ಟಾಡ್ ಅಲ್ಲಿನ ಊಟನಂತೂ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಸ್ಪೆಷಲ್ ಆಗಿ ಮೂರು ತರಹದ ಮಾಂಸದ ಬನ್ ಅವರಿಗೆ ತುಂಬಾ ಇಷ್ಟವಾಯಿತಂತೆ. ನೋಡೋಕೆ ಸಿಂಪಲ್ ಆಗಿದ್ರೂ, ಅದರ ರುಚಿ ಮಾತ್ರ ಸೂಪರ್ ಆಗಿತ್ತಂತೆ. ಅದರ ಸಿಹಿ, ಬಾರ್ಬೆಕ್ಯೂ ಸಾಸ್ ಮತ್ತೆ ಬ್ರೆಡ್ ಅವರಿಗೆ ಫುಲ್ ಫಿದಾ ಆಗೋ ಹಾಗೆ ಮಾಡಿತ್ತಂತೆ. ಟೋರ್ಟಿಲ್ಲಾದಲ್ಲಿ ಸುತ್ತಿರೋ ಸಾಸೇಜ್ ($4.99) ಮತ್ತೆ ಹನಿ ಮಸ್ಟರ್ಡ್ ಡಿಪ್ ಕೂಡ ಅವರಿಗೆ ಒಳ್ಳೆ ಅನಿಸಿಕೆ ಕೊಟ್ಟಿತ್ತಂತೆ.

ಇದರ ಜೊತೆಗೆ, ಅವರು ಪ್ಯಾಡಲ್ ಟೈಲ್ ($3.79) ಅನ್ನೋ ಸಿಹಿ ತಿನಿಸು ತಿಂದಿದ್ದಾರೆ. ಅದು ದಾಲ್ಚಿನ್ನಿ ರೋಲ್ ಮತ್ತೆ ಕ್ರೊಸೆಂಟ್ ಮಿಕ್ಸ್ ಆಗಿದ್ದು, ಸಕ್ಕತ್ತಾದ ದಾಲ್ಚಿನ್ನಿ ಫ್ಲೇವರ್ ಇತ್ತಂತೆ. ಆದ್ರೆ, ಕೊರಿಯನ್ ಬಾರ್ಬೆಕ್ಯೂ ಫ್ಲೇವರ್ ಇರೋ ಜರ್ಕಿ ಅವರಿಗೆ ಅಷ್ಟಾಗಿ ಇಷ್ಟ ಆಗಲಿಲ್ಲ. ತಮ್ಮ ವಿಡಿಯೋದಲ್ಲಿ ಟಾಡ್ ಆ ಪೆಟ್ರೋಲ್ ಬಂಕ್‌ನ ಹಿಂಭಾಗದ ಗೋಡೆ ತೋರಿಸಿದ್ರು, ಅಲ್ಲಿ ತುಂಬಾ ತಂಪು ಪಾನೀಯಗಳ ಮಷಿನ್‌ಗಳಿದ್ವು. ಡ್ರಿಂಕ್ಸ್ $4.99 ಗೆ ಸಿಗುತ್ತೆ, ಮತ್ತೆ ರೀಫಿಲ್ ಮಾಡ್ಕೊಳ್ಳೋಕೆ ಬರೀ $1.99 ಅಷ್ಟೇ! ಅವರು ಅಲ್ಲಿನ ಫೇಮಸ್ ಬೀವರ್ ನಗ್ಗೆಟ್ಸ್‌ನೂ ಹೊಗಳಿದ್ದಾರೆ.

ಬುಕ್-ಈ’ಸ್ ಬರೀ ಪೆಟ್ರೋಲ್ ಬಂಕ್ ಅಷ್ಟೇ ಅಲ್ಲ; ಇದು ಟೆಕ್ಸಾಸ್ ಬಾರ್ಬೆಕ್ಯೂ, ಮನೆಯಲ್ಲಿ ಮಾಡಿರೋ ಫಡ್ಜ್, ಬೀವರ್ ನಗ್ಗೆಟ್ಸ್, ಜರ್ಕಿ ಮತ್ತೆ ಫ್ರೆಶ್ ಪೇಸ್ಟ್ರಿಗಳಂಥ ಸ್ಪೆಷಲ್ ಅನುಭವ ಕೊಡೋ ಜಾಗ. ಅಮೆರಿಕಾದಾದ್ಯಂತ 50 ಬುಕ್-ಈ’ಸ್ ಸ್ಟೋರ್‌ಗಳಿದ್ದು, ಅದ್ರಲ್ಲಿ 35 ಟೆಕ್ಸಾಸ್‌ನಲ್ಲೇ ಇವೆ. ಇವುಗಳ ದೊಡ್ಡದಾದ ಮತ್ತೆ ಕ್ಲೀನ್ ಆಗಿರೋ ಟಾಯ್ಲೆಟ್‌ಗಳು ಕೂಡ ತುಂಬಾ ಫೇಮಸ್ ಅಂತೆ!

ಟಾಡ್ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ಟೆಕ್ಸಾಸ್‌ನ ಹೆಮ್ಮೆ” ಅಂತ ಒಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು “ವೆಲ್ಕಮ್ ಟು ಟೆಕ್ಸಾಸ್ ಫ್ರೆಂಡ್” ಅಂತ ಹೇಳಿದ್ದಾರೆ. “ಇದು ಯುಕೆನಲ್ಲೂ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು” ಅಂತ ತುಂಬಾ ಜನ ಅಭಿಪ್ರಾಯ ಪಟ್ಟಿದ್ದಾರೆ.

ಈ ಮೊದಲು ಟೆನ್ನೆಸ್ಸಿಯ ಸೆವಿರ್‌ವಿಲ್ಲೆಯಲ್ಲಿದ್ದ ಬುಕ್-ಈ’ಸ್ 74,707 ಚದರ ಅಡಿ ವಿಸ್ತೀರ್ಣದೊಂದಿಗೆ ವಿಶ್ವದ ಅತಿದೊಡ್ಡ ಪೆಟ್ರೋಲ್ ಬಂಕ್ ಅಂತ ಹೆಸರು ಪಡೆದಿತ್ತು ಮತ್ತೆ ವಿಶ್ವದ ಅತಿ ಉದ್ದದ ಕಾರ್ ವಾಶ್ ಕೂಡ ಅಲ್ಲೇ ಇತ್ತು. ಆದ್ರೆ, ಈಗ ಆ ಜಾಗನ ಟೆಕ್ಸಾಸ್‌ನ ಲುಲಿಂಗ್‌ನಲ್ಲಿರೋ ಬುಕ್-ಈ’ಸ್ ಕಸಿದುಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read