ಆಲೂಗಡ್ಡೆ ಬಣ್ಣ ಕಪ್ಪಗಾಗುವುದರ ಹಿಂದಿದೆ ಈ ಕಾರಣ

ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಎಲ್ಲ ಋತುವಿನಲ್ಲೂ ಇದನ್ನು ಬಳಸಲಾಗುತ್ತದೆ. ಕೆಲ ಆಲೂಗಡ್ಡೆ ಕತ್ತರಿಸಿದಾಗ ಒಳಗೆ ನೀಲಿ ಅಥವಾ ಕಪ್ಪಾಗಿ ಕಾಣುತ್ತದೆ. ಕೆಲವೊಮ್ಮೆ ಆಲೂಗಡ್ಡೆ ಹೊರಗೂ ಈ ಬಣ್ಣ ಬಂದಿರುತ್ತದೆ. ಆಲೂಗಡ್ಡೆ ಹಾಳಾಗಿದೆ ಎಂದು ಅದನ್ನು ಎಸೆಯುತ್ತೇವೆ. ಆದ್ರೆ ವಾಸ್ತವದಲ್ಲಿ ಆಲೂಗಡ್ಡೆ ಹಾಳಾಗಿರುವುದಿಲ್ಲ.ಇದಕ್ಕೆ ಆಸಕ್ತಿದಾಯಕ ಕಾರಣವಿದೆ.

ಆಲೂಗಡ್ಡೆಯ ಕೆಲವು ಭಾಗ ನೀಲಿ ಅಥವಾ ಕಪ್ಪು ಕಾಣುತ್ತದೆ. ಇದರ ಹಿಂದಿನ ಕಾರಣ ಆಲೂಗಡ್ಡೆಗೆ ಗಾಯವಾಗಿರುವುದು. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಚಿಲ್ಲಿಂಗ್ ಇಂಜ್ಯೂರಿ ಎಂದು ಕರೆಯಲಾಗುತ್ತದೆ. ಶೀತದಿಂದಾಗಿ ಆಲೂಗಡ್ಡೆಯ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಆ ಭಾಗವು ನೀಲಿ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಆಲೂಗಡ್ಡೆಯ ಚೀಲವನ್ನು ಪದೇ ಪದೇ ಇಲ್ಲಿಂದ ಅಲ್ಲಿಗೆ ಎತ್ತಿ ಹಾಕಿದಾಗ ಪರಸ್ಪರ ತಾಗುತ್ತದೆ. ಈ ಕಾರಣದಿಂದಾಗಿ, ಆಲೂಗಡ್ಡೆಯ ಜೀವಕೋಶದ ಗೋಡೆಗಳು ಗಾಯಗೊಳ್ಳುತ್ತವೆ. ಅವು ಕಿಣ್ವವನ್ನು ಬಿಡುಗಡೆ ಮಾಡುತ್ತವೆ. ಅದು ಅಂತಹ ಕಪ್ಪು ಕಲೆಗಳನ್ನುಂಟು ಮಾಡುತ್ತದೆ.

ಇಂತಹ ಆಲೂಗಡ್ಡೆ ತಿನ್ನುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಇದು ವಿಚಿತ್ರವಾಗಿ ಕಾಣುತ್ತದೆ. ಆದ್ದರಿಂದ ಜನರು ಆ ಭಾಗವನ್ನು ಎಸೆಯಲು ಇಷ್ಟಪಡುತ್ತಾರೆ. ಆದರೆ ಆಲೂಗಡ್ಡೆಯು ಕಡು ಹಸಿರು ಬಣ್ಣದಲ್ಲಿ ಕಂಡುಬಂದರೆ, ಅದನ್ನು ತಿನ್ನಬೇಡಿ. ಇದ್ರಿಂದ ಹೊಟ್ಟೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read