ಯಂಗ್‌ ಅಂಡ್ ಫಿಟ್‌ ಆಗಲು ಹೀಗಿರಲಿ ಪುರುಷರ ಬೆಳಗಿನ ಆಹಾರ

ಒಳ್ಳೆಯ ಕೆಲಸಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು ಅನ್ನೋ ನಂಬಿಕೆಯಿದೆ. ಯಾಕಂದ್ರೆ ನಮ್ಮ ಇಡೀ ದಿನದ ಮೂಡ್‌ ಬೆಳಗಿನ ಆರಂಭವನ್ನೇ ಅವಲಂಬಿಸಿರುತ್ತದೆ. ಬೆಳಗಿನ ಆರಂಭ  ಆರೋಗ್ಯಕರವಾಗಿದ್ರೆ ಇಡೀ ದಿನ ಉತ್ತಮವಾಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ನಂತರ ಕೆಲವು ಆರೋಗ್ಯಕರ ಪದಾರ್ಥಗಳನ್ನು ಮಾತ್ರ ತಿನ್ನಬೇಕು. ಪುರುಷರು ಕೂಡ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಮನೆಯ ಯಜಮಾನ ಅಥವಾ ಉದ್ಯೋಗ ಮಾಡುವ ಪುರುಷರು ಇಡೀ ದಿನ ಹೊರಗಡೆ ಇರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇದರಿಂದ ಪೌಷ್ಠಿಕಾಂಶದ ಜೊತೆಗೆ ಶಕ್ತಿಯನ್ನೂ ಪಡೆಯಬಹುದು. ಹಾಗಾಗಿ ಬೆಳಗ್ಗೆ ಪುರುಷರು ಯಾವ ಆಹಾರ ಸೇವಿಸಬೇಕು ಅನ್ನೋದನ್ನು ನೋಡೋಣ.

ಓಟ್‌ ಮೀಲ್‌ : ಓಟ್ ಮೀಲ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಬ್ಬಿಣ, ಕ್ಯಾಲ್ಸಿಯಂ, ಫೋಲೇಟ್ ಮತ್ತು ಸತು, ಓಟ್ ಮೀಲ್‌ನಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಜೀರ್ಣಾಂಗ ವ್ಯವಸ್ಥೆ ಸಹ ಆರೋಗ್ಯಕರವಾಗಿರುತ್ತದೆ. ಅಷ್ಟೇ ಅಲ್ಲ ಓಟ್ ಮೀಲ್ ತಿನ್ನುವುದರಿಂದ ದೇಹದ ದೌರ್ಬಲ್ಯವೂ ದೂರವಾಗುತ್ತದೆ.

ಡ್ರೈ ನಟ್ಸ್‌: ಡ್ರೈ ಫ್ರೂಟ್ಸ್‌ನಲ್ಲಿರೋ ಆರೋಗ್ಯಕರ ಅಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೆಳಗ್ಗೆ ಡ್ರೈ ನಟ್ಸ್ ತಿನ್ನುವುದರಿಂದ ಪುರುಷರು ಶಕ್ತಿ ಪಡೆಯುತ್ತಾರೆ. ರಾತ್ರಿಯಲ್ಲಿ ನೆನೆಸಿಟ್ಟು ಬೆಳಗ್ಗೆ ಅವುಗಳನ್ನು ತಿನ್ನಬಹುದು. ಇದನ್ನು ಸೇವಿಸುವುದರಿಂದ ಹೃದಯವೂ ಆರೋಗ್ಯವಾಗಿರುತ್ತದೆ.

ಜೇನುತುಪ್ಪ: ಜೇನುತುಪ್ಪ ಅತ್ಯಂತ ಪರಿಣಾಮಕಾರಿ ಆಯುರ್ವೇದ ಔಷಧ. ಪುರುಷರು ತಮ್ಮ ಆಹಾರದಲ್ಲಿ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಬೆಳಗ್ಗೆ  ಬಿಸಿನೀರಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯಬಹುದು.

ಪಪ್ಪಾಯ: ದೇಹವನ್ನು ದೀರ್ಘಕಾಲ ಆರೋಗ್ಯವಾಗಿಡಲು ಪಪ್ಪಾಯ ಹಣ್ಣನ್ನು ಸೇವಿಸಬೇಕು. ಇದನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಹೃದಯವು ಆರೋಗ್ಯಕರವಾಗಿರುತ್ತದೆ. ಪಪ್ಪಾಯ ನಮ್ಮ ರೋಗನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಆದ್ದರಿಂದ ಪುರುಷರು ನಿಯಮಿತವಾಗಿ ಪಪ್ಪಾಯ ಸೇವನೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read