ಪ್ರತಿ ದಿನ ಅನುಲೋಮ – ವಿಲೋಮ ಮಾಡುವುದ್ರಿಂದ ಇದೆ ಈ ಲಾಭ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ದಿನ ನಿತ್ಯದ ವ್ಯಾಯಾಮ ಆರೋಗ್ಯ ಸುಧಾರಿಸುತ್ತದೆ. ಪ್ರತಿ ನಿತ್ಯ ಮಾಡುವ ಯೋಗದಿಂದ ಸಾಕಷ್ಟು ಲಾಭವಿದೆ, ಪ್ರತಿ ದಿನ ಯೋಗ ಮಾಡಲು ಸಮಯವಿಲ್ಲವೆಂದ್ರೆ ಅನುಲೋಮ-ವಿಲೋಮ ಮಾಡಿದ್ರೆ ಸಾಕು. ಇದ್ರಿಂದ ಅನೇಕ ರೋಗಗಳನ್ನು ದೂರ ಮಾಡಬಹುದು.

ಪ್ರತಿ ದಿನ ಮಾಡುವ ಅನುಲೋಮ-ವಿಲೋಮ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶವನ್ನು ಗಟ್ಟಿಗೊಳಿಸುತ್ತದೆ. ಉಸಿರಾಟದ ಸಮಸ್ಯೆಯಿರುವವರು ಪ್ರತಿ ದಿನ ಅನುಲೋಮ-ವಿಲೋಮ ಮಾಡಬೇಕು. ಅಸ್ತಮಾ ಸಮಸ್ಯೆಗೆ ಇದು ಉತ್ತಮ ಮದ್ದು.

ಅನುಲೋಮ-ವಿಲೋಮದಿಂದ ಪಚನಕ್ರಿಯೆ ಸುಲಭವಾಗುತ್ತದೆ. ಆಮ್ಲಜನಕ ಸುಲಭವಾಗಿ ದೇಹದೊಳಗೆ ಸೇರಲು ನೆರವಾಗುತ್ತದೆ. ಪಚನಕ್ರಿಯೆ ಸುಲಭವಾಗಿ ಅಜೀರ್ಣ ಸಮಸ್ಯೆ ದೂರವಾಗುತ್ತದೆ.

ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಬಹಳ ಮುಖ್ಯ. ಮನಸ್ಸು ಸರಿಯಾಗಿಲ್ಲದೆ ಹೋದ್ರೆ ಕಾಡದೆ ಅನೇಕ ಸಮಸ್ಯೆಗಳು ಕಾಡುತ್ತವೆ. ಒತ್ತಡ ಕೂಡ ಹಾಗೆ. ಒತ್ತಡದಿಂದ ಅನೇಕ ಸಮಸ್ಯೆಗಳಾಗುತ್ತವೆ. ಒತ್ತಡದಿಂದ ಬಳಲುವವರು ಪ್ರತಿ ದಿನ ಅನುಲೋಮ-ವಿಲೋಮ ಮಾಡಿ ಇದಕ್ಕೆ ನಿಯಂತ್ರಣ ಹೇರಬಹುದು.

ಅನುಲೋಮ-ವಿಲೋಮದಿಂದ ರಕ್ತ ಶುದ್ಧಿಯಾಗುತ್ತದೆ. ಇದು ಹೃದಯಕ್ಕೆ ಒಳ್ಳೆಯದು. ಹೃದಯ ಸಂಬಂಧಿ ಸಮಸ್ಯೆ ಕಾಡುವವರು ಪ್ರತಿ ದಿನ ಅನುಲೋಮ-ವಿಲೋಮ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read